identical ಐಡೆಂಟಿಕಲ್‍
ಗುಣವಾಚಕ
  1. (ಬೇರೆ ಬೇರೆ ಕಾಲದಲ್ಲಿ ನೋಡಿದ ಒಂದೇ ವಸ್ತುವಿನ ವಿಷಯದಲ್ಲಿ) ಅದೇ ಆದ; ಅನನ್ಯ; ಅಭಿನ್ನವಾದ.
  2. (ಬೇರೆ ಬೇರೆ ವಸ್ತುಗಳ ವಿಷಯದಲ್ಲಿ) ಒಂದೇ ವಿಧವಾದ; ಸರ್ವಾಂಗಸಮ; ತದ್ರೂಪವಾದ; ತದ್ವತ್ತಾದ; ಪ್ರತಿ ವಿವರದಲ್ಲೂ ಹೊಂದಿಕೆಯುಳ್ಳ.
  3. (ಅವಳಿ ಮಕ್ಕಳ ವಿಷಯದಲ್ಲಿ) ಏಕಾಂಡಜ; ಒಂದೇ ಅಂಡದಿಂದ ಹುಟ್ಟಿದ; ಒಂದೇ ಲಿಂಗದವರಾದ, ಸಾಮಾನ್ಯವಾಗಿ ಬಹಳ ಹತ್ತಿರವಾಗಿ ಹೋಲುವ.
  4. (ತರ್ಕಶಾಸ್ತ್ರ, ಗಣಿತ) ಅನನ್ಯತ್ವ ಪ್ರತಿಪಾದಕ; ಏಕತ್ವವನ್ನು ಹೇಳುವ, ನಿರೂಪಿಸುವ.