idealism ಐಡಿಅಲಿಸಮ್‍
ನಾಮವಾಚಕ
  1. ಆದರ್ಶೀಕರಣ ಪ್ರವೃತ್ತಿ; ವಸ್ತುಗಳನ್ನು ಆದರ್ಶರೂಪದಲ್ಲಿ ಚಿತ್ರಿಸುವ, ನಿರೂಪಿಸುವ ಮನಸ್ಸಿನ ವೃತ್ತಿ.
  2. (ಕಲೆ, ಸಾಹಿತ್ಯದ ವಿಷಯಗಳ) ವಿಭಾವನಾತ್ಮಕ ನಿರೂಪಣೆ; ಕಲ್ಪನಾತ್ಮಕ ಪ್ರತಿಪಾದನೆ.
  3. ಆದರ್ಶಗಳ-ಕಲ್ಪನೆ, ರೂಪಣ.
  4. ಆದರ್ಶಗಳ-ಅನುಷ್ಠಾನ, ಅನುಸರಣೆ.
  5. (ತತ್ತ್ವಶಾಸ್ತ್ರ) ಭಾವನಾವಾದ; ವಿಜ್ಞಾನವಾದ; ಪ್ರತ್ಯಯವಾದ; ಇಂದ್ರಿಯಗೋಚರವಾಗುವ ಬಾಹ್ಯ ವಸ್ತುಗಳು ವಾಸ್ತವವಾಗಿ ಭಾವನಾಮಯವಾದವು ಎಂಬ ಸಿದ್ಧಾಂತ.