See also 2ideal
1ideal ಐಡಿಅಲ್‍
ಗುಣವಾಚಕ
  1. ಆದರ್ಶಪ್ರಾಯ(ವಾದ); ಆದರ್ಶ ಸ್ವರೂಪದ; ಪರಿಪೂರ್ಣ; ಪರಮಶ್ರೇಷ್ಠ; ಅತ್ಯುಚ್ಚ ಕಲ್ಪನೆಗೆ ಅನುರೂಪವಾಗಿರುವ: ideal beauty ಆದರ್ಶ ಸೌಂದರ್ಯ.
  2. ಉತ್ಕೃಷ್ಟ; ಅತ್ಯುತ್ತಮ: an ideal spot for a home ಮನೆಗೆ ಉತ್ಕೃಷ್ಟವಾದ ಜಾಗ.
  3. ಭಾವಪ್ರತೀಕವಾಗಿರುವ; ಕಲ್ಪನೆಯ ಮೂರ್ತರೂಪವಾದ.
  4. ಕಲ್ಪನಾ ಮಾತ್ರದ; ಭಾವನಾ ಮಾತ್ರದ; ಕೇವಲ ಕಲ್ಪನೆಯ; ಭಾವನೆಯಲ್ಲಿ, ಕಲ್ಪನೆಯಲ್ಲಿ – ಮಾತ್ರವಿರುವ; ವಾಸ್ತವಿಕವಲ್ಲದ; ಕೇವಲ – ಆದರ್ಶಪ್ರಾಯವಾದ, ಕಲ್ಪನಾಸ್ವರೂಪದ: an ideal marriage ಕೇವಲ ಆದರ್ಶಪ್ರಾಯವಾದ ವಿವಾಹ.
  5. (ಪ್ಲೇಟೋವಿನ ಸಿದ್ಧಾಂತದ) ಮೂಲರೂಪಗಳ; ಆದರ್ಶ ರೂಪಗಳ; ಆದರ್ಶರೂಪಗಳಿಗೆ ಸಂಬಂಧಿಸಿದ.
  6. ಅನುಕೂಲವಾದ; ಪ್ರಯೋಜನಕರ; ಉತ್ತಮ: it would be ideal if she could accompany us to look after the children ಮಕ್ಕಳನ್ನು ನೋಡಿಕೊಳ್ಳಲು ಅವಳು ನಮ್ಮ ಸಂಗಡ ಬರುವುದಕ್ಕಾದರೆ ಅದು ಬಹಳ ಅನುಕೂಲವಾಗಿರುತ್ತದೆ.
See also 1ideal
2ideal ಐಡಿಅಲ್‍
ನಾಮವಾಚಕ
  1. ಪರಿಪೂರ್ಣ ಮಾದರಿ; ನಿರ್ದಿಷ್ಟ ಮಾದರಿ; ನ್ಯೂನತೆಯಿಲ್ಲದ ಮಾದರಿ.
  2. ಆದರ್ಶ; ಅನುಕರಣೀಯ ವಸ್ತು, ವ್ಯಕ್ತಿ; ಅನುಕರಣಕ್ಕೆ ಆದರ್ಶವೆಂದು ಇಟ್ಟುಕೊಂಡ ವಿಷಯ, ವ್ಯಕ್ತಿ.
  3. (ಸಾಧಿಸಬೇಕಾದ, ಗುರಿಯಾಗಿಟ್ಟುಕೊಳ್ಳುವ) ಧ್ಯೇಯ; ಆದರ್ಶ.