idea ಐಡಿಅ
ನಾಮವಾಚಕ
  1. ಆದಿ ಯಾ ಆರ್ಷ ಪ್ರತೀಕ; ಮೂಲ ಮಾದರಿ; ಸುತ್ತಲ ಪ್ರಪಂಚದಲ್ಲಿ ನಾವು ಕಾಣುವ ಯಾವುದೇ ವರ್ಗದ ನಿರ್ಜೀವ ಯಾ ಸಜೀವ ವಸ್ತುವಿನ ಲಕ್ಷಣಗಳಿಂದ ಭಿನ್ನವಾಗಿದ್ದು ಆ ವರ್ಗದ ಆದರ್ಶ ಲಕ್ಷಣಗಳನ್ನು ಹೊಂದಿದೆಯೆನ್ನಲಾದ, ಆ ವರ್ಗದ ಮೂಲ ಮಾದರಿ ಯಾ ಆರ್ಷೇಯ ಪ್ರತೀಕ.
  2. (ಗುರಿಯಾಗಿಟ್ಟುಕೊಳ್ಳಬೇಕಾದುದು, ಸೃಷ್ಟಿಸಬೇಕಾದುದು, ಮೊದಲಾದವುಗಳ) ಕಲ್ಪನೆ; ಭಾವನೆ; ಆಲೋಚನೆ.
  3. ಉದ್ದೇಶ; ಅಭಿಪ್ರಾಯ; ಯೋಜನೆ: the idea of becoming an engineer ಎಂಜಿನಿಯರಾಗಬೇಕೆಂಬ ಉದ್ದೇಶ.
  4. ಮನೋಭಾವನೆ; ಮನಸ್ಸಿಗೆ ಹೊಳೆದ ಕಲ್ಪನೆ.
  5. ಆಲೋಚನಾ ವಿಧಾನ; ಆಲೋಚನೆಯ-ಮಾರ್ಗ, ರೀತಿ, ಧೋರಣೆ.
  6. ಕಲ್ಪನೆ; (ಅಸ್ಪಷ್ಟ) ಭಾವನೆ; ಎಣಿಕೆ: the idea of his doing such a thing ಅವನು ಇಂಥ ಕೆಲಸ ಮಾಡುವನೆಂಬ ಎಣಿಕೆ. I had no idea you were there ನೀನು ಅಲ್ಲಿರುವೆ ಎಂಬ ಕಲ್ಪನೆಯೇ ನನಗಿರಲಿಲ್ಲ.
  7. (ಪ್ಲೇಟೋವಿನ ತತ್ತ್ವ) ಆದರ್ಶ ರೂಪ; ಯಾವ ವರ್ಗದಲ್ಲಾದರೂ ಇರುವ ಪ್ರತ್ಯೇಕ ವಸ್ತುಗಳು ಯಾವುದರ ಅಪೂರ್ಣ ಪ್ರತಿಗಳಾಗಿರುವುವೋ ಆ ಚಿರಸ್ಥಾಯಿಯಾದ ಆದರ್ಶ ರೂಪ.
  8. (ಡೇಕಾರ್ಟ್‍, ಲಾಕ್‍ ಇವರ ಸಿದ್ಧಾಂತಗಳಲ್ಲಿ ಯಾ ಮಾನಸಿಕ ಅರಿವಿನ) ಪ್ರತ್ಯಕ್ಷ ವಿಷಯ.
  9. (ಕ್ಯಾಂಟ್‍) ಪರಾಸತ್ತೆ; ಅನುಭವಾತೀತವಾದ ಮತ್ತು ಚಿಂತನದ ಶುದ್ಧ ತರ್ಕಕ್ಕೆ ಮಾತ್ರ ಗೋಚರವಾದ ವಿಷಯ.
  10. (ಹೆಗೆಲ್‍) (ವ್ಯಾವಹಾರಿಕ ಸತ್ಯವೆಲ್ಲವೂ ಯಾವುದರ ಅಭಿವ್ಯಕ್ತಿಯೋ ಆ) ಪಾರಮಾರ್ಥಿಕ ಸತ್ಯ.
ನುಡಿಗಟ್ಟು
  1. have no idea (ಆಡುಮಾತು)
    1. ಗೊತ್ತೇಇಲ್ಲದಿರು.
    2. ತೀರ ಅಸಮರ್ಥನಾಗಿರು.
  2. get (or have) ideas (ಆಡುಮಾತು) ಹೇರಾಸೆ, ಅವಿಧೇಯತೆ, ಮೊದಲಾದವನ್ನು ಉಳ್ಳವನಾಗಿರು.
  3. man of ideas ಪ್ರತ್ಯುತ್ಪನ್ನಮತಿ; ಸಮಯಸ್ಫೂರ್ತಿಯುಳ್ಳವನು.
  4. not my idea of (ಆಡುಮಾತು) ನಾನು ಅಂದುಕೊಳ್ಳುವಂಥದ್ದಲ್ಲದ; ನನ್ನ ಕಲ್ಪನೆಯದ್ದಲ್ಲದ: this is not my idea of a pleasant evening ಇದು ನನ್ನ ಕಲ್ಪನೆಯ ಹಿತವಾದ ಸಂಜೆಯಲ್ಲ.
  5. put ideas into person’s head ಒಬ್ಬನ(ಳ) ತಲೆಗೆ ಹಿರಿಯಾಸೆ ಮೊದಲಾದವನ್ನು ತುಂಬು; ಒಬ್ಬನಿಗೆ ತಂತಾನೆ ಬಾರದೆ ಇರುವಂತಹ ಮಹದಾಕಾಂಕ್ಷೆ ಮೊದಲಾದವನ್ನು ಸೂಚಿಸು; (ಮಹತ್ವಾಕಾಂಕ್ಷೆ ಮೊದಲಾದ) ಭಾವನೆಗಳನ್ನು ತಲೆಗೆ ತುಂಬು.
  6. that’s an idea (ಆಡುಮಾತು) ಆ ಸೂಚನೆ (ಮೊದಲಾದದ್ದು) ಪರಿಶೀಲನಾರ್ಹವಾಗಿದೆ.
  7. the big idea (ಸಾಮಾನ್ಯವಾಗಿ ವ್ಯಂಗ್ಯವಾಗಿ) ಮಹಾಯೋಜನೆ; ಘನೋದ್ದೇಶ: what’s the big idea? ಏನಯ್ಯಾ ಅದು, ಘನೋದ್ದೇಶ? (ಏನದು ಹುಚ್ಚಾಟ! ಎಂಬರ್ಥದಲ್ಲಿ).
  8. the very idea! ಆಹಾ! ಎಂಥ ಕಲ್ಪನೆ! ಸೂಚನೆ! (ಆಡುಮಾತು) (ಅಸಮ್ಮತಿ ಯಾ ಭಿನ್ನಾಭಿಪ್ರಾಯವನ್ನು ಸೂಚಿಸುವ ಉದ್ಗಾರ).
  9. the young idea ಎಳೆಯ ಮನಸ್ಸು; ಮಗುವಿನ ಮನಸ್ಸು.
  10. what an idea! = ನುಡಿಗಟ್ಟು \((8)\).