iconometer ಐಕನಾಮಿಟರ್‍
ನಾಮವಾಚಕ
  1. (ಛಾಯಾಚಿತ್ರಣ) ಬಿಂಬಮಾಪಕ; ಕ್ಯಾಮರಾಕ್ಕೆ ಲಗತ್ತಿಸಿರುವ, ಯಾ ಬಿಡಿಯಾಗಿದ್ದು ಬೇರೆಬೇರೆ ಲೆನ್ಸು ಮತ್ತು ಛಾಯಾಚಿತ್ರ ಪ್ಲೇಟುಗಳಿಗೆ ಅಳವಡಿಸಬಹುದಾಗಿರುವ, ನೇರ ದೃಶ್ಯದರ್ಶಕ; ಕ್ಯಾಮರಾದಲ್ಲಿ ಹಿಡಿಯಬಹುದಾದಷ್ಟು ಇದಿರಿನ ದೃಶ್ಯದ ಪ್ರಮಾಣವನ್ನು ತೋರಿಸುವ ಸಾಧನ.
  2. (ಸರ್ವೇಕ್ಷಣೆಯಲ್ಲಿ) ಬಿಂಬಮಾಪಕ; ವಸ್ತುವಿನ ಗಾತ್ರ ಯಾ ದೂರವನ್ನು ತಿಳಿದುಕೊಳ್ಳಲು ಬಳಸುವ ದ್ಯುತಿ ಉಪಕರಣ.