iceberg ಐಸ್‍ಬರ್ಗ್‍
ನಾಮವಾಚಕ
  1. ಹಿಮಗುಡ್ಡ; ನೀರ್ಗಲ್ಲ ಬಂಡೆ; (ಸಾಮಾನ್ಯವಾಗಿ) ಧ್ರುವ ಪ್ರದೇಶಗಳಲ್ಲಿ ಹಿಮನದಿಯಿಂದ ಬೇರ್ಪಟ್ಟು ಸಮುದ್ರದಲ್ಲಿ ತೇಲುತ್ತಿರುವ ಮಂಜುಗಡ್ಡೆಯ ಭಾರೀ ಗುಡ್ಡ. Figure: iceberg
  2. (ರೂಪಕವಾಗಿ) ನಿರ್ಭಾವುಕ; ಜಡಪ್ರಕೃತಿಯವನು(ಳು); ಭಾವಶೂನ್ಯ ವ್ಯಕ್ತಿ.
ಪದಗುಚ್ಛ

tip of the iceberg

  1. ಹಿಮಗುಡ್ಡದ ತುದಿ; ಸಮುದ್ರದ ಮೇಲ್ಮೈಯಿಂದ ಸ್ವಲ್ಪ ಮೇಲ್ಭಾಗಕ್ಕೆ ಚಾಚಿಕೊಂಡಿರುವ ನೀರ್ಗಲ್ಲ ಗುಡ್ಡ.
  2. (ರೂಪಕವಾಗಿ) (ಯಾವುದೇ ವಿಷಯದ, ಮುಖ್ಯವಾಗಿ ತೊಂದರೆಯ) ಪ್ರಕಟ ಭಾಗ; ಪ್ರತ್ಯಕ್ಷಾಂಶ (ಕಾಣದೆ ಇರುವ ಭಾಗ ಬಹಳ ಇದೆ).