hysteria ಹಿಸ್ಟಿಅರಿಅ
ನಾಮವಾಚಕ

ಹಿಸ್ಟೀರಿಯ; ಉನ್ಮಾದ:

  1. ಚಿತ್ತೋನ್ಮಾದ; ಚಿತ್ತವಿಕೋಪ; ತೀವ್ರಭಾವೋದ್ರೇಕ, ಸಂವೇದನೆ ಮತ್ತು ಕ್ರಿಯಾಶಕ್ತಿಗಳ ಪ್ರಕ್ಷೋಭೆ ಮೊದಲಾದ ವಿವಿಧ ಅಪಸಾಮಾನ್ಯ ಪರಿಣಾಮಗಳು, ಅರಿವಳಿಕೆ, ಸೆಳವು ಮೊದಲಾದವುಗಳಿಂದ ಕೂಡಿದ, ಸಾಮಾನ್ಯವಾಗಿ ನೈತಿಕ ಹಾಗು ಬೌದ್ಧಿಕ ಚಾಂಚಲ್ಯಗಳನ್ನು ಒಳಗೊಂಡ, ಒಂದು ನರವ್ಯಾಧಿ.
  2. ಚಿತ್ತಕ್ಷೋಭೆ; ಚಿತ್ತೋದ್ರೇಕ ; ಹುಚ್ಚು ಹುಚ್ಚು ನಗು ಯಾ ಅಳು ಮೊದಲಾದವುಗಳಿಂದ ಕೂಡಿದ ಭಾವದ ಯಾ ಭಯದ, ನಿಯಂತ್ರಿಸಲಾಗದ ವಿಸ್ಫೋಟ, ಕೆರಳು.