hypostasis ಹೈಪಾಸ್ಟಸಿಸ್‍
ನಾಮವಾಚಕ
(ಬಹುವಚನ hypostases ಉಚ್ಚಾರಣೆ ಹೈಪಾಸ್ಟಸೀಸ್‍)
  1. (ವೈದ್ಯಶಾಸ್ತ್ರ) ರಕ್ತಸಂಚಯ; ಅತಿಯಾದ ನೆತ್ತರುಗೂಡಿಕೆ; ಅವಯವಗಳ ಕೆಳಭಾಗಗಳಲ್ಲಿ ರಕ್ತವು ಸಾಮಾನ್ಯವಾಗಿರಬೇಕಾದುದಕ್ಕಿಂತ ಹೆಚ್ಚಾಗಿ ಕೂಡಿಕೊಳ್ಳುವುದು.
  2. (ಅಧ್ಯಾತ್ಮಶಾಸ್ತ್ರ) (ಉಪಾಧಿಗಳಿಂದ ಯಾ ಮೂಲ ರೂಪಕ್ಕೆ ಸಂಬಂಧಿಸಿರದ ಅಂಶಗಳಿಂದ ಬೇರ್ಪಡಿಸಿದ, ಅವುಗಳ ಮೂಲದಲ್ಲಿರುವ) ಶುದ್ಧಸತ್ತ್ವ; ಮೂಲತತ್ತ್ವ; ನಿರುಪಾಧಿಕ ತತ್ತ್ವ.
  3. (ದೇವತಾಶಾಸ್ತ್ರ)
    1. (ಯೇಸುಕ್ರಿಸ್ತನ) ಮೂರ್ತಿತ್ವ; ವ್ಯಕ್ತಿತ್ವ; ಮೂರ್ತವ್ಯಕ್ತಿರೂಪ.
    2. (ದೇವರ) ಸಾಕಾರರೂಪ; ಮೂರ್ತರೂಪ; ಪುರುಷರೂಪ.