hydroplane ಹೈಡ್ರಪ್ಲೇನ್‍
ನಾಮವಾಚಕ
  1. ನೀರುವಿಮಾನ; ಜಲವಿಮಾನ; ಸಮುದ್ರವಿಮಾನ; ನೀರಿನ ಮೇಲೆಯೇ ಇಳಿಯಲು ಮತ್ತು ನೀರಿನ ತಲದಿಂದಲೇ ಹಾರಲು ಅನುಕೂಲಿಸುವಂತೆ ತೇಲುವೆಗಳನ್ನು ಅಳವಡಿಸಿದ, ಯಾ ಅಡಿಯಲ್ಲಿ ದೋಣಿಯಂಥ ಸಾಧನವನ್ನು ಜೋಡಿಸಿದ ವಿಮಾನ.
  2. ನೀರಿನ ಮೇಲೆ ತೇಲುವಂತೆ ಜೋಡಿಸಿದ ವಿಮಾನದ ಜೋಡಣೆ; ವಿಮಾನದ ತೇಲುವೆ.
  3. (ನೀರಿನ ಮೇಲ್ಮೈ ಮೇಲೆ ಭಾರಿ ವೇಗದಲ್ಲಿ ತೇಲಿಕೊಂಡು ಹೋಗುವಂತೆ ಅಡಿಭಾಗವನ್ನು ಅಳವಡಿಸಿದ) ಮೋಟಾರ್‍ ದೋಣಿ.
  4. ಜಲಾಂತರ್ಗಾಮಿ – ರೆಕ್ಕೆ, ಚುಕ್ಕಾಣಿ; ಜಲಾಂತರ್ಗಾಮಿಯು ನೀರಿನಿಂದ ಮೇಲಕ್ಕೆ ಏಳಲು ಯಾ ನೀರಿನೊಳಕ್ಕೆ ಮುಳುಗಲು ಅನುಕೂಲಿಸಲು, ಅದಕ್ಕೆ ಜೋಡಿಸಿರುವ ಈಜುರೆಕ್ಕೆ ಯಾ ಚುಕ್ಕಾಣಿಯಂಥ ಉಪಕರಣ.