hydra ಹೈಡ್ರ
ನಾಮವಾಚಕ
  1. (ಗ್ರೀಕ್‍ ಪುರಾಣ) ಹೈಡ್ರ; ಸಹಸ್ರಫಣಿ; ಕಡಿದುಹಾಕಿದಂತೆಲ್ಲ ಮರಳಿ ಹುಟ್ಟುತ್ತಿದ್ದ ಹಲವು ತಲೆಗಳ ಹಾವು, ಸರ್ಪ.
  2. (ರೂಪಕವಾಗಿ) ದುರ್ನಿರ್ಮೂಲನೀಯ ವಸ್ತು; ನಿರ್ಮೂಲಮಾಡಲು ಅತಿಕಷ್ಟವಾದದ್ದು.
  3. ನೀರಹಾವು; ನೀರೊಳ್ಳೆ; ಜಲಸರ್ಪ.
  4. ಹೈಡ್ರ; ಸಿಹಿನೀರಿನಲ್ಲಿ ವಾಸಿಸುವ, ಕೊಳವೆಯಾಕಾರದ ಮೈಯುಳ್ಳ, ಬಾಯಿಯ ಬಳಿ ಗ್ರಹಣತಂತುಗಳುಳ್ಳ, ಸಿಲೆಂಟರೇಟ ಬಳಗದ ಒಂದು ಸಣ್ಣ ಪ್ರಾಣಿ. Figure: hydra-4