See also 2hut
1hut ಹಟ್‍
ನಾಮವಾಚಕ
  1. ಗುಡಿಸಲು; ಜೋಪಡಿ; ಗುಡಿಲು; ಗುಡಿ.
  2. (ಸೈನ್ಯ) ಹಂಗಾಮಿ ವಸತಿ; ತಾತ್ಕಾಲಿಕ ಸೈನಿಕ ಬಿಡಾರ; ಸೈನಿಕ ಪಡೆಗಳಿಗೆ ಹಂಗಾಮಿ ವಾಸಕ್ಕಾಗಿ ಮರ ಮೊದಲಾದವುಗಳಿಂದ ಕಟ್ಟಿದ ಮನೆ, ಕಟ್ಟಡ.
See also 1hut
2hut ಹಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hutted ವರ್ತಮಾನ ಕೃದಂತ hutting.)

ಸಕರ್ಮಕ ಕ್ರಿಯಾಪದ

  1. (ಸೈನ್ಯದ ಪಡೆ ಮೊದಲಾದವನ್ನು) ಬಿಡಾರಗಳಲ್ಲಿ ತಂಗಿಸು; ಹಂಗಾಮಿ ವಸತಿಯಲ್ಲಿ – ಇರಿಸು, ಇಳಿಸು.
  2. ಗುಡಿಸಲುಗಳನ್ನು ಒದಗಿಸು.
ಅಕರ್ಮಕ ಕ್ರಿಯಾಪದ
  1. ಗುಡಿಸಲಿನಲ್ಲಿ ತಂಗು, ತಂಗಿರು, ಇಳಿದುಕೊ.
  2. (ಸೈನ್ಯ) ಬಿಡಾರದಲ್ಲಿ, ಹಂಗಾಮಿ ವಸತಿಯಲ್ಲಿ – ತಂಗು, ಇಳಿದುಕೊ.