See also 2hustle
1hustle ಹಸ್‍ಲ್‍
ಸಕರ್ಮಕ ಕ್ರಿಯಾಪದ
  1. ಒರಟೊರಟಾಗಿ – ತಳ್ಳು, ನೂಕು, ದಬ್ಬು.
  2. ಒರಟೊರಟಾಗಿ – ತಳ್ಳಿಕೊಂಡು ಹೋಗು, ನುಗ್ಗು.
  3. (ವ್ಯಕ್ತಿ ಮೊದಲಾದವರನ್ನು ಒಳಕ್ಕೆ, ಹೊರಕ್ಕೆ, ಮೊದಲಾದವಕ್ಕೆ) ನೂಕು; ತಳ್ಳು; ದಬ್ಬು.
  4. (ಮರ್ಯಾದೆ ಗೌರವಗಳನ್ನು ಲೆಕ್ಕಿಸದೆ, ಒಬ್ಬನನ್ನು ಯಾವುದೇ ಸ್ಥಿತಿಗೆ ಯಾ ಯಾವುದೇ ಕೆಲಸ ಮಾಡಲು) ಒತ್ತಾಯಪಡಿಸು; ಬಲಾತ್ಕರಿಸು; ಬಲವಂತಮಾಡು; ಬಲವಂತವಾಗಿ ದೂಡು, ತಳ್ಳು.
  5. (ಅಶಿಷ್ಟ) ದುಂಡಾವರ್ತಿಯಿಂದ ಕಿತ್ತುಕೊ; ಬಲಾತ್ಕಾರದಿಂದ ಪಡೆದುಕೊ.
  6. (ಅಶಿಷ್ಟ) ವಂಚಿಸು; ಮೋಸಮಾಡು.
ಅಕರ್ಮಕ ಕ್ರಿಯಾಪದ
  1. (ಒಂದರ ಮೇಲೆ) ಒರಟಾಗಿ – ನೂಕು, ದೂಡು, ದಬ್ಬು, ತಳ್ಳು.
  2. ನುಗ್ಗಿಕೊಂಡು ಹೋಗು.
  3. ಅವಸರಪಡು; ಆತುರಪಡು; ಗಡಿಬಿಡಿಯಿಂದ ವರ್ತಿಸು.
See also 1hustle
2hustle ಹಸ್‍ಲ್‍
ನಾಮವಾಚಕ
  1. ನೂಕುನುಗ್ಗಲು.
  2. ನುಗ್ಗುವುದು; ತಳ್ಳುವುದು.
  3. ಗಡಿಬಿಡಿ; ಅವಸರ; ಆತುರ – ಮಾಡುವುದು ಯಾ ಪಡುವುದು.