See also 2husband
1husband ಹಸ್‍ಬಂಡ್‍
ನಾಮವಾಚಕ

ಗಂಡ; ಪತಿ.

ಪದಗುಚ್ಛ
  1. bad husband (ಪ್ರಾಚೀನ ಪ್ರಯೋಗ) ಅಸಮರ್ಥ ವ್ಯವಸ್ಥಾಪಕ; ಅದಕ್ಷ ಮೇಲ್ವಿಚಾರಕ; ತನ್ನ ಹತ್ಯದ ಕೆಲಸಕಾರ್ಯಗಳನ್ನು ಯಾ ಇತರ ವ್ಯಾಪಾರ ವ್ಯವಹಾರಗಳನ್ನು ಕುಶಲವಾಗಿ ಮತ್ತು ಮಿತವ್ಯಯದಿಂದ ನಿರ್ವಹಿಸದೆ ಇರುವವನು.
  2. good husband (ಪ್ರಾಚೀನ ಪ್ರಯೋಗ) ಉತ್ತಮ ವ್ಯವಸ್ಥಾಪಕ; ದಕ್ಷ ಮೇಲ್ವಿಚಾರಕ; ಕುಶಲವಾಗಿ ಮತ್ತು ಮಿತವ್ಯಯದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವವನು.
See also 1husband
2husband ಹಸ್‍ಬಂಡ್‍
ಸಕರ್ಮಕ ಕ್ರಿಯಾಪದ
  1. ಮಿತವ್ಯಯದಿಂದ ನಿರ್ವಹಿಸು; ದುಂದುಗಾರಿಕೆಯಿಲ್ಲದೆ ನಡೆಸು.
  2. ಕಡಮೆ ವ್ಯಯದಿಂದ ಮಾಡು; ಮಿತವಾಗಿ ಬಳಸು; ಮಿತವ್ಯಯ ಮಾಡು: to husband one’s resources ತನ್ನ ಆನುಕೂಲ್ಯಗಳನ್ನು ಮಿತವಾಗಿ ಬಳಸು.
  3. (ಪ್ರಾಚೀನ ಪ್ರಯೋಗ) ನೆಲವನ್ನು ಉಳು; ಷಿ ಮಾಡು.
  4. (ಪ್ರಾಚೀನ ಪ್ರಯೋಗ) (ಸಸ್ಯಗಳನ್ನು) ಬೆಳೆ.
  5. (ಪ್ರಾಚೀನ ಪ್ರಯೋಗ) (ಹಾಸ್ಯ ಪ್ರಯೋಗ) ಗಂಡನನ್ನು – ಒದಗಿಸುದೊರಕಿಸು.
  6. (ಪ್ರಾಚೀನ ಪ್ರಯೋಗ) (ಹೆಂಗಸನ್ನು) ಮದುವೆಯಾಗು.