hurt ಹರ್ಟ್‍
ಕ್ರಿಯಾಪದ
(ವರ್ತಮಾನ ಕೃದಂತ hurting, ಭೂತರೂಪ ಮತ್ತು ಭೂತಕೃದಂತ hurt).
ಸಕರ್ಮಕ ಕ್ರಿಯಾಪದ
  1. (ದೇಹಕ್ಕೆ) ಗಾಯ ಯಾ ನೋವು ಉಂಟುಮಾಡು; ಗಾಯಗೊಳಿಸು ಯಾ ನೋಯಿಸು.
  2. ನಷ್ಟಪಡಿಸು; ನಷ್ಟವುಂಟು ಮಾಡು; ಹಾನಿಮಾಡು.
  3. (ಒಬ್ಬನನ್ನು) ತೊಂದರೆಗೆ, ಉಪದ್ರವಕ್ಕೆ, ಅನ್ಯಾಯಕ್ಕೆ – ಗುರಿಪಡಿಸು.
  4. (ಮನುಷ್ಯನನ್ನು, ಅವನ ಮನಸ್ಸನ್ನು) ನೋಯಿಸು; ವ್ಯಥೆಗೊಳಿಸು.
ಅಕರ್ಮಕ ಕ್ರಿಯಾಪದ
  1. ನೋವುಂಟುಮಾಡು; ನೋಯಿಸು.
  2. ನಷ್ಟವುಂಟುಮಾಡು; ಹಾನಿಗೊಳಿಸು.
  3. ಕೇಡುಂಟುಮಾಡು; ತೊಂದರೆ ಉಂಟುಮಾಡು.
  4. (ಆಡುಮಾತು) ನೋಯು; ಯಾತನೆಪಡು; ನೋವು ತಿನ್ನು; ನೋವನ್ನು ಅನುಭವಿಸು: does your hand hurt ನಿನ್ನ ಕೈ ನೋಯುತ್ತಿದೆಯೇ?