hunter ಹಂಟರ್‍
ನಾಮವಾಚಕ
  1. ಬೇಟೆಗಾರ; ಬೇಡ; ವ್ಯಾಧ; ಶಿಕಾರಿ.
  2. (ರೂಪಕವಾಗಿ) (ಯಾವುದನ್ನೇ) ಅರಸುವವನು; ಅನ್ವೇಷಕ; ಅನ್ವೇಷಿ: fortune hunter ಧನಾನ್ವೇಷಿplace-hunt ಸ್ಥಾನಾನ್ವೇಷಿ; ಪದವಿಗಾಗಿ, ಸ್ಥಾನಕ್ಕಾಗಿ ಪ್ರಯತ್ನಿಸುವವನು.
  3. ಬೇಟೆ ಕುದುರೆ; ಗಯಾಶ್ವ; ಬೇಟೆಯಲ್ಲಿ ಬಳಸುವ ಕುದುರೆ.
  4. ಬೇಟೆನಾಯಿ; ಬೇಟೆಯಾಡಲು ತರಬೇತಿ ಕೊಟ್ಟ ನಾಯಿ.
  5. ಗಡಿಯಾರದ ಮುಖದ ಗಾಜಿನ ರಕ್ಷಣೆಗಾಗಿ ಕೀಲಿನ ಮುಚ್ಚಳವಿರುವ – ಕಿಸೆ ಗಡಿಯಾರ, ಜೇಬು ಗಡಿಯಾರ.
  6. (ಮುಖದ ಗಾಜಿನ) ಹೊರಗಿನ ಸುತ್ತಿಗೆ ಮಾತ್ರ ಮುಚ್ಚಳವಿರುವ ಕಿಸೆ ಯಾ ಜೇಬು ಗಡಿಯಾರ.
  7. (Hunt) (ಖಗೋಳ ವಿಜ್ಞಾನ) ಓರಿಯನ್‍ ನಕ್ಷತ್ರ ಪುಂಜ; ವ್ಯಾಧ ನಕ್ಷತ್ರ ಪುಂಜ; ಗಶಿರಾ ನಕ್ಷತ್ರವಿರುವ ಪುಂಜ.
ಪದಗುಚ್ಛ
  1. half-hunt = hunter(6).
  2. hunt’s moon ಸುಗ್ಗಿ ಹುಣ್ಣಿಮೆಯ ಅನಂತರದ ಹುಣ್ಣಿಮೆ.