hungry ಹಂಗ್ರಿ
ಗುಣವಾಚಕ
  1. ಹಸಿದ; ಹಸಿದಿರುವ; ಹಸಿವಿನಿಂದ ಬಳಲಿದ; ಕ್ಷುತ್ಪೀಡಿತ; ಕ್ಷುಧಾರ್ತ: hungry as a hunter ಬೇಡನಂತೆ ಹಸಿದ.
  2. ಹಸಿವಿನ; ಹಸಿದ; ಹಸಿದಂತೆ ಕಾಣುವ; ಹಸಿವು ಕಾಣುವ; ಹಸಿವಿನಿಂದ ಒಣಗಿದ, ಬಾಡಿದ, ಕಂಗೆಟ್ಟ: a hungry look ಹಸಿದ ಮುಖ; ಹಸಿವಿನಿಂದ ಕಂಗೆಟ್ಟ ಮುಖ.
  3. ಹಸಿವುಂಟುಮಾಡುವ; ಹಸಿವು ಹುಟ್ಟಿಸುವ: a hungry air ಹಸಿವುಂಟುಮಾಡುವ ಗಾಳಿ; ಹಸಿವು ಹುಟ್ಟಿಸುವ ಹವೆ.
  4. (ರೂಪಕವಾಗಿ) ಆತುರದ; ತವಕದ; ಹಾತೊರೆತದ; ತೀವ್ರ ಹಂಬಲದ; ಕಟ್ಟಾಸೆಯ; ಅತ್ಯಂತ ಆಶೆಯಿಂದ ಕೂಡಿದ.
  5. (ನೆಲದ, ಮಣ್ಣಿನ ವಿಷಯದಲ್ಲಿ) ಬರಡು; ಬಂಜರು; ಹಡಿಲು; ನಿಸ್ಸಾರ(ವಾದ); ಫಲವತ್ತಲ್ಲದ.