See also 2hump
1hump ಹಂಪ್‍
ನಾಮವಾಚಕ
  1. (ಮನುಷ್ಯನ ಬೆನ್ನಿನ ಮೇಲಿನ ಅವಲಕ್ಷಣವಾದ) ಗೂನು; ಡೂಗು.
  2. (ಒಂಟೆ ಮೊದಲಾದವುಗಳ ಬೆನ್ನಿನ ಮೇಲೆ ಸಹಜ ಲಕ್ಷಣವಾದ) ಡುಬ್ಬು; ಡುಬ್ಬ.
  3. (ದನ ಮೊದಲಾದವುಗಳ) ಹಿಣಿಲು.
  4. (ಭೂಮಿ ಮೊದಲಾದವುಗಳ) ಉಬ್ಬು; ದಿಣ್ಣೆ; ಬೋರೆ.
  5. ರೈಲು ದಿಣ್ಣೆ; ರೈಲು ದಿಬ್ಬ; ಭೂಮಿಯ ಗುರುತ್ವಾಕರ್ಷಣ – ಬಲದಿಂದ ಅಪೇಕ್ಷಿತ ಸ್ಥಳಕ್ಕೆ ತಾವೇ ಓಡುವಂತೆ ರೈಲ್ವೆ ಗಾಡಿಗಳನ್ನು ಯಾವುದರ ಮೇಲಿಂದ ದೂಡುತ್ತಾರೋ ಅಂಥ ದಿಣ್ಣೆದಿಬ್ಬ.
  6. (ರೂಪಕವಾಗಿ) (ಉದ್ಯಮ, ವಿಷಮ ಪರೀಕ್ಷೆ, ಮೊದಲಾದವುಗಳ) ಉತ್ಕಟ ಸ್ಥಿತಿ; ನಿರ್ಣಾಯಕ ಘಟ್ಟ.
  7. (ಅಶಿಷ್ಟ) ಕಿರಿಕಿರಿ; ಉದ್ರೇಕ; ಖಿನ್ನತೆಯ ಯಾ ಕೋಪದ ಕೆರಳು(ವಿಕೆ): it gives me the hump ಅದರಿಂದ ನನಗೆ ಕಿರಿಕಿರಿಯಾಗಿದೆ.
ನುಡಿಗಟ್ಟು
  1. live on one’s hump ಸ್ವಸಂಪೂರ್ಣವಾಗಿರು; ಸ್ವಾವಲಂಬಿಯಾಗಿರು; ಪರಾವಲಂಬನವಿಲ್ಲದೆ ಬದುಕು.
  2. over the hump ಅತ್ಯುತ್ಕಟ ಸ್ಥಿತಿಯನ್ನು ದಾಟಿದ; ವಿಷಮ ಪರಿಸ್ಥಿತಿಯನ್ನು ದಾಟಿದ.
See also 1hump
2hump ಹಂಪ್‍
ಸಕರ್ಮಕ ಕ್ರಿಯಾಪದ
  1. ಡು ಮಾಡು; ಡುಬ್ಬದಾಕಾರ ಮಾಡು.
  2. (ಬೆನ್ನನ್ನು) ಗೂನುಮಾಡು.
  3. ಕೆರಳಿಸು; ಕಿರಿಕಿರಿ ಉಂಟುಮಾಡು.
  4. ಖಿನ್ನಗೊಳಿಸು; ವಿಷಣ್ಣಗೊಳಿಸು.
  5. (ಮುಖ್ಯವಾಗಿ ಆಸ್ಟ್ರೇಲಿಯ) (ತನ್ನ ಗಂಟನ್ನು, ಮೂಟೆಯನ್ನು) ಹೆಗಲ ಮೇಲೇರಿಸಿಕೊ; ಭುಜದ ಮೇಲಿಟ್ಟುಕೊ.
  6. (ಅಶಿಷ್ಟ) ಶ್ರಮಪಡು; ಪ್ರಯಾಸಪಡು.
  7. (ಅಶಿಷ್ಟ) ಸಂಭೋಗಮಾಡು; ಮೈಥುನ ನಡೆಸು.