See also 2humour
1humour ಹ್ಯೂಮರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಮನಃಸ್ಥಿತಿ; ಚಿತ್ತವೃತ್ತಿ; ಮನೋಭಾವ; ಮನೋಧರ್ಮ.
  2. ಒಲವು; ಪ್ರವೃತ್ತಿ; ಮನಸ್ಸು: the humour for fighting ಹೋರಾಡುವ ಮನಸ್ಸು.
  3. ಹಾಸ್ಯಪ್ರವೃತ್ತಿ; ಪರಿಹಾಸ್ಯಶೀಲತೆ; ವಿನೋದಪ್ರಿಯತೆ.
  4. ಹಾಸ್ಯ; ವಿನೋದ; ತಮಾಷೆ; ಹಾಸ್ಯರಸ.
  5. ಹಾಸ್ಯಪ್ರಜ್ಞೆ; ಹಾಸ್ಯಾಭಿರುಚಿ; ಹಾಸ್ಯಾಭಿಜ್ಞತೆ; ಹಾಸ್ಯರಸಜ್ಞತೆ; ಹಾಸ್ಯವನ್ನು ಅರಿಯುವ ಮತ್ತು ಹಾಸ್ಯಾಸ್ಪದವಾದವನ್ನು ಯಾ ವಿನೋದಕರವಾದುದನ್ನು ಸವಿಯುವ ಶಕ್ತಿ; ಕೇವಲ ಬುದ್ಧಿ ಚಾತುರ್ಯವಾಗಿರದೆ, ಸಹೃದಯತೆಯಿಂದ ಕೂಡಿದ ವಿನೋದಪ್ರಜ್ಞೆ.
  6. (ಚರಿತ್ರೆ) ದೈಹಿಕ ಧಾತು; ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಗುಣಲಕ್ಷಣಗಳನ್ನು ನಿರ್ಧರಿಸುವುದೆಂದು, ದೇಹದಲ್ಲಿರುವ ನಾಲ್ಕು ಪ್ರಧಾನ ದ್ರವಗಳಲ್ಲಿ ಯಾ ರಸಧಾತುಗಳಲ್ಲಿ (ರಕ್ತ, ಶ್ಲೇಷ್ಮ, ಹಳದಿ ಪಿತ್ತ ಮತ್ತು ಕರಿಪಿತ್ತ) ಒಂದು.
  7. ತಿಕ್ಕಲು; ವಿಚಿತ್ರ ಮನೋಭಾವ.
ಪದಗುಚ್ಛ
  1. bad humour ಅಪ್ರಸನ್ನತೆ; ಅಸಮಾಧಾನ; ಕೋಪ.
  2. good humour ಸುಪ್ರಸನ್ನತೆ.
  3. ill humour ಅಪ್ರಸನ್ನತೆ; ಕೋಪ.
  4. out of humour ಅಸಂತುಷ್ಟ; ಅಪ್ರಸನ್ನ; ಅಪ್ರೀತ; ಮನಸ್ಸು ಸಮಾಧಾನವಾಗಿಲ್ಲದ; ತಾಳ್ಮೆಗೆಟ್ಟ; ಸಹನೆಗೆಟ್ಟ.
  5. sense of humour = 1humour(5).
See also 1humour
2humour ಹ್ಯೂಮರ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. (ಮನುಷ್ಯ ಅಭಿರುಚಿ, ಮನೋವೃತ್ತಿ, ಮೊದಲಾದ ವನ್ನು) ಖುಷಿಪಡಿಸು; ತೃಪ್ತಿಪಡಿಸು; ಒಲಿಸು; ಪುಸಲಾಯಿಸು; ಉಬ್ಬಿಸು.
  2. (ಇನ್ನೊಬ್ಬನ ಖುಷಿಗೆ ತಕ್ಕಂತೆ) ಹೊಂದಿಕೊ; ತನ್ನನ್ನು ಹೊಂದಿಸಿಕೊ.
  3. (ಇನ್ನೊಬ್ಬನ ಮನಸ್ಸು ಮೊದಲಾದವನ್ನು) ಅನುವರ್ತಿಸು; ಇನ್ನೊಬ್ಬನು ಹೇಳಿದ್ದಕ್ಕೆ ತಾಳಹಾಕು.