humidity ಹ್ಯೂಮಿಡಿಟಿ
ನಾಮವಾಚಕ
(ಬಹುವಚನ humidities).
  1. ಆರ್ದ್ರತೆ; ತೇವವಾಗಿರುವಿಕೆ; ತೇವದ ಸ್ಥಿತಿ.
  2. ತೇವ; ಥಂಡಿ; (ಮುಖ್ಯವಾಗಿ ವಾತಾವರಣದಲ್ಲಿರುವ) ತೇವದ ಪ್ರಮಾಣ; ಆರ್ದ್ರತೆಯ ಪ್ರಮಾಣ.
ಪದಗುಚ್ಛ

relative humidity ಸಾಪೇಕ್ಷ ಆರ್ದ್ರತೆ; ಯಾವುದೇ ಸಮಯದಲ್ಲಿ ವಾಯುವಿನಲ್ಲಿ ಕಂಡುಬರುವ ಆರ್ದ್ರತೆಗೂ ಅದೇ ತಾಪದಲ್ಲಿ ತೇವದಿಂದ ಪರ್ಯಾಪ್ತವಾಗಿರುವ ವಾಯುವಿನಲ್ಲಿ ಕಂಡು ಬರುವ ಆರ್ದ್ರತೆಗೂ ಇರುವ ಅನುಪಾತ.