See also 2humbug  3humbug
1humbug ಹಂಬಗ್‍
ನಾಮವಾಚಕ
  1. ಮೋಸ; ಠಕ್ಕು; ಸೋಗು; ನಟನೆ; ವೇಷ; ಕಪಟಾಚಾರ; ಖೋಟಾತನ.
  2. ಮೋಸಕೃತ್ಯ; ಮೋಸ; ವಂಚನೆ.
  3. ಕಪಟ ವೇಷಧಾರಿ; ಆಷಾಢಭೂತಿ; ಠಕ್ಕ.
  4. (ಬ್ರಿಟಿಷ್‍ ಪ್ರಯೋಗ) ಹಂಬಗ್‍; ಪೆಪ್ಪರ್‍ಮಿಂಟ್‍ ರುಚಿ ಕೊಟ್ಟಿರುವ, ಚೆನ್ನಾಗಿ ಕುದಿಸಿ ತಯಾರಿಸಿದ ಒಂದು ಮಿಠಾಯಿ.
See also 1humbug  3humbug
2humbug ಹಂಬಗ್‍
ಭಾವಸೂಚಕ ಅವ್ಯಯ

ಅಬದ್ಧ; ಅಸಂಬದ್ಧ (ಪ್ರಲಾಪ); ಅರ್ಥವಿಲ್ಲದ್ದು; ಅರ್ಥಹೀನ ಮಾತು.

See also 1humbug  2humbug
3humbug ಹಂಬಗ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ humbugged, ವರ್ತಮಾನ ಕೃದಂತ humbugging)

ಸಕರ್ಮಕ ಕ್ರಿಯಾಪದ

(ಒಬ್ಬನನ್ನು ಒಂದು ಸ್ಥಿತಿಗೆ ಸಿಕ್ಕಿಕೊಳ್ಳುವಂತೆ, ಒಂದು ಕೆಲಸ ಮಾಡುವಂತೆ ಯಾ ಮಾಡದಂತೆ) ಮರುಳುಗೊಳಿಸು; ವಂಚಿಸು; ಕಣ್ಣಿಗೆ ಮಣ್ಣೆರಚು.

ಅಕರ್ಮಕ ಕ್ರಿಯಾಪದ
  1. ಠಕ್ಕನಾಗಿರು; ಕಪಟವೇಷಿಯಾಗಿರು; ಆಷಾಢಭೂತಿಯಾಗಿರು.
  2. ಠಕ್ಕನಂತೆ, ಕಪಟ ವೇಷಿಯಂತೆ, ಆಷಾಡಭೂತಿಯಂತೆ – ನಡೆದುಕೊ, ವರ್ತಿಸು.