See also 2humble
1humble ಹಂಬ್‍ಲ್‍
ಗುಣವಾಚಕ
( ತರರೂಪ humbler, ತಮರೂಪ humblest).
  1. ತಗ್ಗಿ ನಡೆಯುವ; ನಮ್ರ; ವಿನೀತ; ದೀನ; ತನ್ನ ಬಗ್ಗೆ ಬಹಳ ಕೀಳುಭಾವನೆ ಹೊಂದಿರುವ, ತಾಳಿರುವ.
  2. ನಮ್ರ; ವಿನಯದಿಂದ ನೀಡಿದ: humble apoligies ನಮ್ರತೆಯಿಂದ ಸಲ್ಲಿಸಿದ ಕ್ಷಮಾಯಾಚನೆಗಳು. humble opinion ವಿನಯದಿಂದ ನೀಡಿದ ಅಭಿಪ್ರಾಯ.
  3. ಕೀಳಾದ; ಕೀಳುಸ್ಥಿತಿಯ; ಅಂತಸ್ತಿನಲ್ಲಿ, ಸ್ಥಾನಮಾನಗಳಲ್ಲಿ ಕೆಳಮಟ್ಟದ.
  4. (ವಸ್ತುಗಳ ವಿಷಯದಲ್ಲಿ) (ರೀತಿ, ಗಾತ್ರ, ವಿಸ್ತಾರ, ಮೊದಲಾದವುಗಳಲ್ಲಿ) ಸಾಮಾನ್ಯ(ವಾದ); ಸಾಧಾರಣ(ವಾದ).
ಪದಗುಚ್ಛ

your humble servant (ಮುಖ್ಯವಾಗಿ ಹಿಂದೆ ಪತ್ರ ಲೇಖನದ ಲೇಖಕನ ಅಂಕಿತದ ಒಕ್ಕಣೆಯಲ್ಲಿ ಬರೆಯುತ್ತಿದ್ದ) ತಮ್ಮ ನಮ್ರ ಸೇವಕ.

ನುಡಿಗಟ್ಟು

eat humble pie

  1. ದೈನ್ಯದಿಂದ ಕ್ಷಮೆ ಬೇಡು.
  2. ಅಪಮಾನಕ್ಕೆ ತಲೆಬಾಗು; ಅಪಮಾನ ಸಹಿಸಿಕೊ, ನುಂಗಿಕೊ: as he was but a subordinate, he had to eat humble pie ಅವನು ಕೇವಲ ಕೆಳ ದರ್ಜೆಯ ಅಧಿಕಾರಿಯಾಗಿದ್ದ ಕಾರಣ ತನಗಾದ ಅಪಮಾನವನ್ನು ನುಂಗಿಕೊಳ್ಳಲೇ ಬೇಕಾಯಿತು.
See also 1humble
2humble ಹಂಬಲ್‍
ಸಕರ್ಮಕ ಕ್ರಿಯಾಪದ
  1. ವಿನೀತನನ್ನಾಗಿ ಮಾಡು; ನಮ್ರನನ್ನಾಗಿಸು.
  2. ಸೊಕ್ಕು ಮುರಿ; ಅಹಂಕಾರ ಬಿಡಿಸು; ಗರ್ವಭಂಗಮಾಡು.
  3. ಕೀಳಾಗಿ – ಕಾಣು, ಮಾಡು.
  4. (ತನ್ನನ್ನೇ) ದೀನನೆಂದು ಭಾವಿಸಿಕೊ; ಕೀಳೆಂದು ತಿಳಿದುಕೊ: humble oneself ತಗ್ಗಿನಡೆ; ಹಿನೈಸಿಕೊ; ಕೀಳರಿಮೆಯಿಂದ ನಡೆದುಕೊ, ವರ್ತಿಸು.