humanity ಹ್ಯೂಮ್ಯಾನಿಟಿ
ನಾಮವಾಚಕ
(ಬಹುವಚನ humanities)
  1. ಮನುಷ್ಯಸ್ವಭಾವ; ಮನುಷ್ಯತ್ವ; ಮಾನವತ್ವ.
  2. (ಬಹುವಚನದಲ್ಲಿ) ಮನುಷ್ಯ ಲಕ್ಷಣಗಳು; ಮಾನವಗುಣಗಳು.
  3. ಮಾನವಕುಲ; ಮನುಷ್ಯವರ್ಗ; ಮಾನವಕೋಟಿ.
  4. ಮಾನವೀಯತೆ; ಲೋಕೋಪಕಾರ ಬುದ್ಧಿ; ಲೋಕಹಿತಾಸಕ್ತಿ.
  5. ದಯೆ; ಅನುಕಂಪ; ಮರುಕ.
  6. (ಬಹುವಚನದಲ್ಲಿ) ಮಾನವ ಸೇವಾಕಾರ್ಯಗಳು; ಲೋಕೋಪಕಾರಗಳು.
  7. ಮಾನವಧರ್ಮ; ಅತಿಮಾನುಷ ಯಾ ದೈವೀ ವಿಷಯಗಳ ಗೊಡವೆ ಬಿಟ್ಟು ಮಾನವಹಿತಸಾಧನೆಯನ್ನು ಗುರಿಯಾಗಿ ಉಳ್ಳ ಮತಶ್ರದ್ಧೆ.
  8. (ಸ್ಕಾಟ್ಲಂಡಿನ ವಿಶ್ವವಿದ್ಯಾನಿಲಯಗಳಲ್ಲಿ) ಲ್ಯಾಟಿನ್‍ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನ.
  9. (ಬಹುವಚನದಲ್ಲಿ) ಮಾನವಿಕಗಳು; ಮಾನವ ಸಂಸ್ಕೃತಿಗೆ ಸಂಬಂಧಿಸಿದ ವಿದ್ಯೆ ಮತ್ತು ಸಾಹಿತ್ಯಗಳ, ಮುಖ್ಯವಾಗಿ ಲ್ಯಾಟಿನ್‍ ಮತ್ತು ಗ್ರೀಕ್‍ ಕ್ಲಾಸಿಕ್‍ಗಳ, ಅಧ್ಯಯನ.