See also 2humanitarian
1humanitarian ಹ್ಯೂಮ್ಯಾನಿಟೇರಿಅನ್‍
ನಾಮವಾಚಕ
  1. ಮಾನವಹಿತ ಪ್ರತಿಪಾದಕ ಯಾ ಮಾನವಹಿತ ಸಾಧಕ; ಮಾನವಹಿತ ಸಾಧನೆಯೇ ಮನುಷ್ಯನ ಪರಮಗುರಿಯೆಂದು ಪ್ರತಿಪಾದಿಸುವವನು ಯಾ ಅದನ್ನು ಆಚರಣೆಯಲ್ಲಿ ಪಾಲಿಸುವವನು.
  2. ಮಾನವಹಿತಕಾರಿ; ಮಾನವನ ಕ್ಷೇಮಾಭ್ಯುದಯಕ್ಕೆ ಶ್ರಮಿಸುವವನು.
  3. ಲೋಕೋಪಕಾರಿ; ಜನೋಪಕಾರಿ.
See also 1humanitarian
2humanitarian ಹ್ಯೂಮ್ಯಾನಿಟೇರಿಅನ್‍
ಗುಣವಾಚಕ
  1. ಮಾನವಹಿತ ಪ್ರತಿಪಾದಕರ; ಮಾನವಹಿತ ಪ್ರತಿಪಾದಕರಿಗೆ ಸಂಬಂಧಿಸಿದ; ಮಾನವಹಿತ ಪ್ರತಿಪಾದಕರ ವೈಶಿಷ್ಟ್ಯವಾದ.
  2. ಮಾನವಹಿತದ; ಮಾನವಹಿತಕಾರಿಯಾದ.
  3. ಲೋಕಹಿತದ; ಲೋಕೋಪಕಾರದ; ಜನೋಪಕಾರಿಯಾದ; ಮಾನವಹಿತ ಸಾಧನೆ ಮತ್ತು ಮಾನವೋದ್ಧಾರಗಳಲ್ಲಿ ಉತ್ಸಾಹದಿಂದ ತೊಡಗಿರುವ: to use the A-bomb was wrong on humanitarian grounds ಲೋಕಹಿತದ ದೃಷ್ಟಿಯಿಂದ ಪರಮಾಣು ಬಾಂಬನ್ನು ಬಳಸಿದ್ದು ಅಪರಾಧವಾಗಿತ್ತು.