humanist ಹ್ಯೂಮನಿಸ್ಟ್‍
ನಾಮವಾಚಕ
  1. ಮಾನವ ಜಿಜ್ಞಾಸು; ಮಾನವಾಧ್ಯಾಯಿ; ಮನುಷ್ಯ ಸ್ವಭಾವ ಮತ್ತು ಮಾನವ ವ್ಯವಹಾರಗಳನ್ನು ವಿಚಾರ ಮಾಡುವವನು.
  2. ಮಾನವಾಸಕ್ತ; ಮಾನವನ ಕ್ಷೇಮ, ಮೌಲ್ಯ ಮತ್ತು ಗೌರವಗಳಲ್ಲಿ ಆಸಕ್ತಿಯುಳ್ಳವನು.
  3. ಮಾನವಿಕ ಪಂಡಿತ, ವಿದ್ವಾಂಸ; ಮಾನವಿಕ ಶಾಸ್ತ್ರಗಳನ್ನು ಅಧ್ಯಯನ ಮಾಡುವವನು ಯಾ ಅದರಲ್ಲಿ ಪಂಡಿತ.
    1. ಯೂರೋಪಿನ ನವೋದಯ ಕಾಲದ (ಮುಖ್ಯವಾಗಿ 14–16ನೆಯ ಶತಮಾನಗಳ) ಕ್ಲಾಸಿಕಲ್‍ ವಿದ್ವಾಂಸ; ಗ್ರೀಕ್‍ ಮತ್ತು ರೋಮನ್‍ ಪ್ರಾಚೀನ ಸಾಹಿತ್ಯಗಳನ್ನು ಮತ್ತು ಪ್ರಾಕ್ತನ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದವನು.
    2. ಗ್ರೀಕ್‍ ಮತ್ತು ರೋಮನ್‍ ಭಾಷಾ ಸಾಹಿತ್ಯಗಳಲ್ಲಿ ಪಂಡಿತ.
  4. ಮಾನವೀಯತಾವಾದಿ; ಮಾನವ ಪ್ರೇಮಿ; ಜನೋಪಕಾರಿ; ಮಾನವ ಹಿತವನ್ನು ಪ್ರತಿಪಾದಿಸುವವನು ಯಾ ಆಚರಿಸುವವನು.
  5. ಮಾನವತಾವಾದಿ; ಮಾನವತಾವಾದದ ಪ್ರತಿಪಾದಕ ಯಾ ಅನುಯಾಯಿ.