humanism ಹ್ಯೂಮನಿಸಮ್‍
ನಾಮವಾಚಕ
  1. ಮಾನವಾಸಕ್ತಿ; ಮಾನವನಿಷ್ಠೆ; ಮಾನವಹಿತನಿಷ್ಠೆ; ಮಾನವಹಿತಾಸಕ್ತಿ.
  2. ಮಾನವತಾವಾದ; ಮಾನವತಾ ಪಂಥ; ಮಾನವ ಧರ್ಮ; (ದೈವಿಕ ಯಾ ಅತಿ ಮಾನುಷ ವಿಷಯಗಳಿಗೆ ಸಂಬಂಧಿಸಿರದೆ) ಕೇವಲ ಮಾನವ ವ್ಯವಹಾರಗಳಲ್ಲಿ ಯಾ (ವ್ಯಕ್ತಿಯ ಹಿತಕ್ಕಿಂತ) ಮಾನವ ಕುಲದ ಹಿತದಲ್ಲಿ ಆಸಕ್ತಿ ತೋರುವ ಯಾ ಮಾನವನನ್ನು ಒಬ್ಬ ಜವಾಬ್ದಾರಿಯುತ ಹಾಗೂ ಪ್ರಗತಿಶೀಲ ಬೌದ್ಧಿಕ ಪ್ರಾಣಿಯನ್ನಾಗಿ ಪರಿಗಣಿಸುವ ಪಂಥ ಯಾ ವಿಚಾರ ಮಾರ್ಗ.
  3. ಮಾನವತಾ ಸಂಸ್ಕೃತಿ; ಮುಖ್ಯವಾಗಿ ಯೂರೋಪಿನ ನವೋದಯ ಕಾಲದ, ಧಾರ್ಮಿಕ ವಿಷಯಗಳಿಗಿಂತಲೂ ಐಹಿಕ ವಿಷಯಗಳಿಗೆ ಪ್ರಾಧಾನ್ಯ ನೀಡಿದ ವ್ಯಕ್ತಿನಿಷ್ಠತೆ ಹಾಗೂ ಬೌದ್ಧಿಕತೆಗಳಿಗೆ ಒತ್ತುಕೊಟ್ಟ ಮಾನವತಾ ವಾದಿಗಳ ಮಾನವಕೇಂದ್ರಿತ ಸಾಹಿತ್ಯಕ ಸಂಸ್ಕೃತಿ, ಮನೋಧರ್ಮ.
  4. ಮಾನವಿಕಾಧ್ಯಯನ ಯಾ ಮಾನವಿಕಾಸಕ್ತಿ; ಮಾನವನ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಧ್ಯಯನ ಯಾ ಅವುಗಳಲ್ಲಿ ಆಸಕ್ತಿ.
  5. (ವ್ಯರ್ಥವಾದ ಸೈದ್ಧಾಂತಿಕ ಪ್ರತಿಪಾದನೆಗಳನ್ನು ವರ್ಜಿಸಿ, ಮಾನವನ ಅಗತ್ಯಗಳನ್ನು ಒತ್ತಿ ಹೇಳುವ) ಮಾನವನ ಸಿದ್ಧಾಂತ; ಮಾನವಕೇಂದ್ರಿತ ಸಿದ್ಧಾಂತ; ಮಾನವ ಪ್ರಧಾನ್ಯ ವಾದ; ಮಾನವಪ್ರಧಾನ ದೃಷ್ಟಿ.