See also 2human
1human ಹ್ಯೂಮನ್‍
ಗುಣವಾಚಕ
  1. ಮಾನವೀಯ; ಮಾನವ; ಮಾನುಷ; ಮನುಷ್ಯನ ಯಾ ಮನುಷ್ಯನಿಗೆ ಸಂಬಂಧಿಸಿದ: human nature ಮಾನವ ಸ್ವಭಾವ.
  2. ಮಾನವ; ಮಾನುಷ; ಮನುಷ್ಯನಾಗಿರುವ ಯಾ ಮನುಷ್ಯರಿಂದಾದ: human race ಮಾನವ ಕುಲ. human creature ಮನುಷ್ಯ ಪ್ರಾಣಿ.
  3. (ದೈವೀ ಎಂಬುದಕ್ಕೆ ವ್ಯತಿರಿಕ್ತವಾಗಿ) ಮಾನವ; ಮಾನುಷ: human affairs ಮಾನವ ವ್ಯವಹಾರಗಳು. to err is human, to forgive is divine ತಪ್ಪು ಮಾಡುವುದು ಮನುಷ್ಯನ ಸ್ವಭಾವ, ಕ್ಷಮಿಸುವುದು ದೈವೀಗುಣ. after all, he is only human ಎಷ್ಟಾದರೂ ಅವನು ಒಬ್ಬ ಮಾನವನಷ್ಟೆ, ಮಾನವ ಮಾತ್ರದವನಷ್ಟೆ.
  4. ಮಾನವೀಯ; ಮನುಷ್ಯರಿಗೆ ವಿಶಿಷ್ಟವಾದ (ಮುಖ್ಯವಾಗಿ ಉತ್ತಮ) ಲಕ್ಷಣಗಳುಳ್ಳ ಯಾ ವೈಲಕ್ಷಣ್ಯಗಳನ್ನು ತೋರುವ: a very human person ಬಹಳ ಮಾನವೀಯ ವ್ಯಕ್ತಿ.
  5. (ಪ್ರಾಣಿಗಳು, ಯಂತ್ರಗಳು, ಕೇವಲ ವಸ್ತುಗಳು ಇವುಗಳಿಗೆ ಭಿನ್ನವಾಗಿ) ಮಾನವೀಯ; ಮಾನವ – ಲಕ್ಷಣದ, ಗುಣದ.
See also 1human
2human ಹ್ಯೂಮನ್‍
ನಾಮವಾಚಕ

ಮನುಷ್ಯ; ಮನುಷ್ಯ ಮಾನವ (ವ್ಯಕ್ತಿ).