See also 2hull  3hull  4hull
1hull ಹಲ್‍
ನಾಮವಾಚಕ
  1. (ಕಾಯಿ, ಹಣ್ಣೂ, ಮೊದಲಾದವುಗಳ ಮುಖ್ಯವಾಗಿ ಬಟಾಣಿ, ಹುರುಳಿಕಾಯಿಗಳ) ಸಿಪ್ಪೆ; ಹೊರಹೊದಿಕೆ.
  2. (ಧಾನ್ಯಗಳ) ಹೊಟ್ಟು.
  3. (ಸ್ಟ್ರಾಬೆರಿ ಮೊಗ್ಗಿನ) ಪಿಷ್ಪಪಾತ್ರ; ಕವಚ; ಹಸಿರು (ಹೊರೆ)ಹೊದಿಕೆ.
  4. (ರೂಪಕವಾಗಿ) ಹೊದಿಕೆ; ಮುಸುಕು; ಆವರಣ; ಅವಗುಂಠನ.
See also 1hull  3hull  4hull
2hull ಹಲ್‍
ಸಕರ್ಮಕ ಕ್ರಿಯಾಪದ

ಸಿಪ್ಪೆ – ಸುಲಿ, ಎಡೆ, ತೆಗೆ, ಸುಲಿದುಹಾಕು, ಎಡೆದುಹಾಕು.

See also 1hull  2hull  4hull
3hull ಹಲ್‍
ನಾಮವಾಚಕ

(ಹಡಗು, ವಾಯುನೌಕೆ, ಮೊದಲಾದವುಗಳ) ಮೈ; ಒಡಲು; (ದ್ವಜ ಪಟಗಳು, ಕಟ್ಟು ಹಗ್ಗಗಳು, ಮೊದಲಾದವನ್ನು ಬಿಟ್ಟು, ಹಡಗಿನ) ಮೈ ಭಾಗ.

ಪದಗುಚ್ಛ

hull down (ಹಡಗು, ವಾಯುನೌಕೆ, ಮೊದಲಾದವುಗಳ ವಿಷಯದಲ್ಲಿ) ಒಡಲು ಕಾಣದಷ್ಟು ಬಹು ದೂರದಲ್ಲಿ.

See also 1hull  2hull  3hull
4hull ಹಲ್‍
ಸಕರ್ಮಕ ಕ್ರಿಯಾಪದ

(ಹಿರಂಗಿ ಗುಂಡು, ಟಾರ್ಪೆಡೊ ಮೊದಲಾದ ಸಿಡಿಮದ್ದುಗಳಿಂದ ಹಡಗು, ವಾಯು ನೌಕೆ, ಮೊದಲಾದವುಗಳ) ಒಡಲಿಗೆ ಹೊಡೆ.