See also 2huff
1huff ಹಹ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ದಬಾಯಿಸು; ಬೆದರಿಸು; ಜಬರ್‍ದಸ್ತು ಮಾಡು; ಗರ್ವ ಮತ್ತು ಉದ್ಧಟತನದಿಂದ ಆಳಬಯಸು
  2. (ಪ್ರಾಚೀನ ಪ್ರಯೋಗ) ರೇಗಿಬೀಳು; ಮೇಲೆಬೀಳು; ಎರಗಿಬೀಳು
  3. (ಒಬ್ಬನನ್ನು ಒಂದು ವಿಷಯಕ್ಕೆ ಯಾ ಕೆಲಸಕ್ಕೆ ದಬಾವಣೆಯಿಂದ, ಬೆದರಿಕೆಯಿಂದ) ತಳ್ಳು; ನೂಕು; ಒತ್ತಾಯಿಸಿ ನುಗ್ಗಿಸು
  4. ದಬಾಯಿಸು; ಜಬರ್ದಸ್ತುಮಾಡಿ ಬೆದರಿಸು; (ಒಬ್ಬನನ್ನು ಒಂದು ವಿಷಯದಿಂದ ಯಾ ಕೆಲಸದಿಂದ) ಕೈತೆಗೆಸು; ಹಿಂದೆಗೆಯಿಸು; ಹಿಂತೆಗೆಯುವಂತೆ ಮಾಡು
  5. (ತಕ್ಕ ಗೌರವ ತೋರಿಸದೆ ಯಾ ಅಲಕ್ಷ್ಯಮಾಡಿ) ಮರ್ಯಾದೆಗೆ ಧಕ್ಕೆ ತರು; ಅಪಮಾನಿಸು; ಹೀನೈಸು; ಘನತೆಗೆ ಕುಂದುಂಟುಮಾಡು
  6. (ಡ್ರಾಹ್ಟ್ಸ್‍ ಆಟದಲ್ಲಿ) ಎದುರಾಳಿಯ ಕಾಯನ್ನು ದಂಡವಾಗಿ ತೆಗೆದುಹಾಕು, ಹೊಡೆದು ಹಾಕು.
ಅಕರ್ಮಕ ಕ್ರಿಯಾಪದ
  1. ಅಪಮಾನವೆಂದು ಭಾವಿಸು; ಹೀನಾಯವಾದಂತೆಣಿಸು.
  2. (ಗಾಳಿ ಮೊದಲಾದವನ್ನು) ಉಹ್‍ ಉಹ್‍ ಎಂದು ಹೊರಬಿಡು.
  3. (ರೂಪಕವಾಗಿ) ಅಬ್ಬರಿಸು; ಕೂಗಾಡು: huffing and puffing ರೇಗಾಟ ಮತ್ತು ಅಬ್ಬರ.
See also 1huff
2huff ಹಹ್‍
ನಾಮವಾಚಕ
  1. ಮುನಿಸು; ಸಿಟ್ಟು; ಸಿಡುಕು: in a huff ಮುನಿಸುಗೊಂಡು; ಸಿಟ್ಟುಗೊಂಡುtake huff ಮುನಿಸಿಕೊ.
  2. (ಡ್ರಾಹ್ಟ್ಸ್‍ ಆಟ) ಎದುರಾಳಿಯ ಕಾಯನ್ನು ದಂಡವಾಗಿ ತೆಗೆದುಹಾಕಿ ಬಿಡುವುದು, ಹೊಡೆದು ಹಾಕುವುದು.