See also 2how
1how ಹೌ
ಕ್ರಿಯಾವಿಶೇಷಣ
  1. (ಪ್ರಶ್ನಾರ್ಥಕವಾಗಿ)
    1. ಹೇಗೆ; ಯಾವ ರೀತಿ; ಎಂತು: how does he do it? ಅವನದನ್ನು ಹೇಗೆ ಮಾಡುತ್ತಾನೆ? ask him how he does it ಅವನದನ್ನು ಹೇಗೆ ಮಾಡುತಾನೆಂದು ಕೇಳು.
    2. (ಆಧಿಕ್ಯಾರ್ಥ ಸೂಚಿಸುವಲ್ಲಿ) ಹೇಗೆ ತಾನೆ? : how in the world can one do such a task? ಅಂಥ ಒಂದು ಕೆಲಸವನ್ನು ಇಡೀ ಲೋಕದಲ್ಲಿ ಹೇಗೆ ತಾನೆ ಮಾಡಲು ಸಾಧ್ಯ?
  2. (ಪರೋಕ್ಷ ವರದಿಯ ಹೇಳಿಕೆಯಲ್ಲಿ ಆಲಂಕಾರಿಕವಾಗಿ ಯಾ ಸಾಮಾನ್ಯ ಪ್ರಯೋಗವಾಗಿ) ಹೇಗೆ – ಎಂಬುದಾಗಿ, ಎಂದು, ಅಂತ: told us how God was almighty ದೇವರು ಹೇಗೆ ಸರ್ವಶಕ್ತ ಎಂಬುದನ್ನು ತಿಳಿಸಿದ.
  3. (ಪ್ರಶ್ನೆಯಲ್ಲಿ) ಎಷ್ಟು? ಎಷ್ಟು ಮಟ್ಟಿಗೆ? ಎಷ್ಟು ದೂರ? ಎಷ್ಟೊಂದು? ಹೇಗೆ? how far is it? ಎಷ್ಟು ದೂರ ಇದೆ ಅದು?
  4. (ಆಶ್ಚರ್ಯದ ಉದ್ಗಾರವಾಗಿ) ಎಷ್ಟೊಂದು! ಹೇಗೆ! how far it is ಅದು ಎಷ್ಟೊಂದು ದೂರವಿದೆ! how he snores! ಅವನು ಹೇಗೆ, ಎಷ್ಟೊಂದು ಗೊರಕೆ ಹೊಡೆಯುತ್ತಾನೆ!
  5. (ಅಧೀನವಾಕ್ಯದಲ್ಲಿ ಸಂಬಂಧ ಸೂಚಕ ಪದವಾಗಿ)
    1. ಹೇಗಾದರೂ; ಹೇಗೋ; ಯಾವುದೇ ರೀತಿಯಲ್ಲಾದರೂ: do it how you can ಅದನ್ನು ಹೇಗಾದರೂ ಮಾಡು.
    2. ಹಾಗೆ; ಅಂತೆ: do it how can ನಿನಗೆ ಬಂದಂತೆ, ಆದಂತೆ ಮಾಡು.
  6. ಯಾವ ಸ್ಥಿತಿಯಲ್ಲಿ?: how are you? ನೀನು ಹೇಗಿದ್ದೀಯ? ನಿನ್ನ ಸ್ಥಿತಿ ಹೇಗಿದೆ?
ನುಡಿಗಟ್ಟು
  1. and how! (ಮುಖ್ಯವಾಗಿ ವ್ಯಂಗ್ಯದಲ್ಲಿ ಇಲ್ಲವೆ ಆಧಿಕ್ಯಾರ್ಥದಲ್ಲಿ) ಅಷ್ಟಲ್ಲದೆ! ಖಂಡಿತವಾಗಿ: am I happy? and how! ನಾನು ಸುಖವಾಗಿದ್ದೇನೆಯೆ ಅಂತಲ್ಲವೇ (ನೀನು ಕೇಳಿದ್ದು)? ಅಷ್ಟಲ್ಲದೆ!
  2. here is how! (ಸ್ವಸ್ತಿಪಾನ ಮಾಡುವಲ್ಲಿ) ಇಗೋ, ನಿಮ್ಮ ಆರೋಗ್ಯ ಭಾಗ್ಯಕ್ಕಾಗಿ!
  3. how about
    1. -ರೆ ಹೇಗೆ? ನಿನಗೆ ಇಷ್ಟವೇ? how about a game of chess ಒಂದು ಆಟ ಚದುರಂಗದಾಟ ಆಡಿದರೆ ಹೇಗೆ?
    2. ಅದರ ಬಗ್ಗೆ ಏನು ಮಾಡಬೇಕು?
    3. ಅದರ ಬಗ್ಗೆ ಏನು ಸಮಾಚಾರ?
  4. how are you?
    1. ಹೇಗಿದ್ದೀಯೆ? ಆರೋಗ್ಯವಾಗಿದ್ದೀಯಾ? ದೇಹಸ್ಥಿತಿ ಹೇಗಿದೆ?
    2. (ಭೇಟಿಯಾದಾಗ ಯಾ ಪರಿಚಯ ಮಾಡಿದಾಗ ಕೇವಲ ಸಾಂಪ್ರದಾಯಿಕವಾಗಿ ಆಡುವ ಮಾತಾಗಿ) ಹೇಗಿದ್ದೀರಿ? ಚೆನ್ನಾಗಿದ್ದೀರಾ? ಕ್ಷೇಮವೇ? ಕುಶಲವಷ್ಟೆ?
  5. how come (ಆಡುಮಾತು) ಅದು ಹೇಗೆ ಸಂಭವಿಸಿತು? ಅದು ಹೇಗೆ ಸಾಧ್ಯ?
  6. how do? = ನುಡಿಗಟ್ಟು \(4(b)\).
  7. how do you do? = ನುಡಿಗಟ್ಟು \(4(b)\).
  8. how is corn? ಧ್ಯಾನ(ದ ಧಾರಣೆ) ಹೇಗಿದೆ?
  9. how is that for high (ಆಡುಮಾತು) (ಕೇಳುವವನು ಆಶ್ಚರ್ಯಪಡುವಂತೆ ಮಾಡಲು) ದುಬಾರಿ ಬೆಲೆಗೆ ಇದಕ್ಕಿಂತ ಬೇಕೇ?
  10. how much?
    1. ಎಷ್ಟು ಬೆಲೆ ಅದಕ್ಕೆ?
    2. ಎಷ್ಟು ಹಣ?: how much do I owe you? ನಾನು ನಿನಗೆ ಎಷ್ಟು ಹಣ ಕೊಡಬೇಕು?
    3. (ಹಾಸ್ಯ ಪ್ರಯೋಗ) (ಒಬ್ಬನು ಹೇಳಿದ ಮಾತನ್ನು ಪುನಃ ಹೇಳೆಂದು ಕೋರುವಾಗ): “he plays the saxtuba", plays the saxtuba, how much? “ಅವನು ಸ್ಯಾಕ್ಸ್‍ಟ್ಯೂಬಾವಾದನ ಮಾಡುತ್ತಾನೆ"“ ಏನು ವಾದನ ಮಾಡುತ್ತಾನೆ?”
  11. how now? (ಪ್ರಾಚೀನ ಪ್ರಯೋಗ) ಏನು ಹಾಗೆಂದರೆ? ಅದರ ಅರ್ಥ ಏನು?
  12. how on earth etc = ನುಡಿಗಟ್ಟು \((16)\).
  13. how so? ಅದು ಹೇಗೆ? ಅದು ಹಾಗೆಂದು ಹೇಗೆ ಹೇಳುತ್ತಿಯೆ? ಅದು ಹೇಗಾಗುತ್ತದೆ, ತೋರಿಸು ನೋಡೋಣ.
  14. how’s that?
    1. ಅದರ ಬಗ್ಗೆ ನಿನ್ನ ಅಭಿಪ್ರಾಯ ಯಾ ವಿವರಣೆ ಏನು? ಅದರ ಬಗ್ಗೆ ನೀನು ಏನು ಹೇಳುತ್ತಿಯೆ?
    2. (ಕ್ರಿಕೆಟ್‍) (ಆಟಗಾರನು ಅಂಪೈರನ್ನು ಕೇಳುವ ಪ್ರಶ್ನೆಯಾಗಿ) ಹೇಗೆ? ಏನು? ಬ್ಯಾಟುಗಾರ ಔಟಾದನೋ ಇಲ್ಲವೋ?
  15. how that for queer? ವಿಚಿತ್ರ ಎನ್ನುವುದಕ್ಕೆ ಇದಕ್ಕಿಂತ ಬೇಕೇ? ಇದು ಸಾಲದೆ?
  16. how the deuce (or devil, or dickens) ಹೇಗೆ ತಾನೆ?
See also 1how
2how ಹೌ
ನಾಮವಾಚಕ

ಕಾರ್ಯವಿಧಾನ; ಕಾರ್ಯರೀತಿ; ಯಾವುದೇ ಕೆಲಸವನ್ನು ಮಾಡುವ ಬಗೆ, ರೀತಿ, ವಿಧಾನ, ಹೇಗೆ ಎಂಬುದು: the how of it ಅದರ ಕಾರ್ಯವಿಧಾನ; ಅದು ಹೇಗೆ ಎಂಬುದು; ಅದನ್ನು ಮಾಡುವ ಬಗೆ, ರೀತಿ.