hour ಔಅರ್‍
ನಾಮವಾಚಕ
  1. ಗಂಟೆ; ತಾಸು; ದಿವಸದ ಇಪ್ಪತ್ನಾಲ್ಕನೇ ಒಂದು (1/24) ಭಾಗ; 60 ನಿಮಿಷಗಳು: 1700 etc., hours (ಇಪ್ಪತ್ತನಾಲ್ಕು ಘಂಟೆ ಗಡಿಯಾರದ ಮೇಲೆ ಸೊನ್ನೆ ಘಂಟೆಯ ಬಳಿಕ) 17 ಘಂಟೆಗಳು.
  2. (ಸ್ವಲ್ಪ) ಹೊತ್ತು; ವೇಳೆ; ಸಮಯ; (ಕಾಲದ) ಅಲ್ಪಾವಧಿ.
  3. (ಬಹುವಚನದಲ್ಲಿ) ಕೆಲಸದ ವೇಳೆ; ಕಾರ್ಯವೇಳೆ; ಕಾರ್ಯಾವಧಿ; ದಿನಚರಿಯ ಕೆಲಸ ಮೊದಲಾದವುಗಳಿಗೆ ನಿಗದಿ ಮಾಡಿದ ಕಾಲ: office hours are 10 to 5 ಕಚೇರಿಯ ಕೆಲಸದ ವೇಳೆ ಹತ್ತು ಗಂಟೆಯಿಂದ ಐದು ಗಂಟೆಯವರೆಗೆ.
  4. (ಖಗೋಳ ವಿಜ್ಞಾನ) $15^\circ$ ರೇಖಾಂಶ.
  5. (ರೋಮನ್‍ ಕ್ಯಾಥೊಲಿಕ್‍ ಚರ್ಚು) (ಬಹುವಚನದಲ್ಲಿ):
    1. ಪ್ರಾರ್ಥನಾ – ಕಾಲ, ಸಮಯ; ದಿನದಲ್ಲಿ (ಕ್ರೈಸ್ತ) ಪ್ರಾರ್ಥನೆಗಾಗಿ ಗೊತ್ತು ಮಾಡಿರುವ ಏಳು ಹೊತ್ತುಗಳಲ್ಲಿ ಒಂದು.
    2. ಕಾಲಿಕ ಪ್ರಾರ್ಥನೆಗಳು; ಈ ಏಳು ಹೊತ್ತುಗಳಲ್ಲಿ ಮಾಡಬೇಕಾದ ಪ್ರಾರ್ಥನೆ.
  6. ಈಗ; ವರ್ತಮಾನ; ಸದ್ಯದ, ಪ್ರಕೃತ – ಕಾಲ: question of the hour ಈಗಿನ ಪ್ರಶ್ನೆ.
  7. ಗಡಿಯಾರದ ಪ್ರಕಾರ ಗಂಟೆ: what is the hour? ಈಗ ಗಂಟೆ ಎಷ್ಟು?
  8. ಗಂಟೆದೂರ; (ಯಾವುದೇ ಹಿಂದೆ ಹೇಳಿದ ಯಾ ಪರಸ್ಪರ ತಿಳಿದಿರುವ ವಾಹನದಲ್ಲಿ, ಯಾ ನಡಗೆಯಲ್ಲಿ) ಒಂದು ಗಂಟೆಯಲ್ಲಿ ಕ್ರಮಿಸಿದ ದೂರ: we are an hour from Mysore ನಾವು ಮೈಸೂರಿನಿಂದ ಒಂದುಗಂಟೆ ದೂರದಲ್ಲಿದ್ದೇವೆ.
  9. ಕಾಲ; ಗಳಿಗೆ; ಮುಹೂರ್ತ; ಸಕಾಲ; ಯಾವುದೇ ಕೆಲಸ ಮೊದಲಾದವುಗಳ ಯಾ ಮೊದಲಾದವುಗಳಿಗೆ ಅನುಕೂಲವಾದ ಯಾ ನಿಶ್ಚಯಿಸಿದ ಕಾಲ, ಹೊತ್ತು: the hour has come (ಯಾವುದೇ ಕೆಲಸ ಮೊದಲಾದವುಗಳಿಗೆ) ಕಾಲ ಬಂದಿದೆ; ಮುಹೂರ್ತ ಒದಗಿದೆ.
ಪದಗುಚ್ಛ
  1. after hours ಕಚೇರಿ ಮೊದಲಾದವು ಮುಚ್ಚಿದ ಮೇಲೆ; ಕೆಲಸದ ವೇಳೆಯ ಅನಂತರ.
  2. a late hour ರಾತ್ರಿ ಬಹಳ ಹೊತ್ತು ಆದಮೇಲೆ.
  3. bad hours (ಮಲಗುವ ಯಾ ಏಳುವ ವಿಷಯದಲ್ಲಿ) ಅವೇಳೆ; ಅಕಾಲ; ಸರಿಯಲ್ಲದ ಕಾಲ.
  4. early hours (ಮಲಗುವ ಯಾ ಏಳುವ ವಿಷಯದಲ್ಲಿ) ಹೊತ್ತಿಗೆ ಮುಂಚೆ.
  5. evil hour ಕೆಟ್ಟ ಗಳಿಗೆ; ದುರದೃಷ್ಟ, ಅಪಘಾತ, ಹಾನಿ, ಮೊದಲಾದವುಗಳ ಕಾಲ.
  6. good hours (ಮಲಗುವ ಯಾ ಏಳುವ ವಿಷಯದಲ್ಲಿ) ಸಕಾಲ; ಸರಿಯಾದ – ವೇಳೆ, ಕಾಲ.
  7. in a good hour ಒಳ್ಳೆಯ ಹೊತ್ತಿನಲ್ಲಿ; ಸುದೈವದಿಂದ.
  8. in an evil hour ಕೆಟ್ಟ ಹೊತ್ತಿನಲ್ಲಿ; ವಿಷಗಳಿಗೆಯಲ್ಲಿ; ದುರ್ದೈವದಿಂದ.
  9. late hours (ಮಲಗುವ ಯಾ ಏಳುವ ವಿಷಯದಲ್ಲಿ) ಹೊತ್ತಾಗಿ; ಹೊತ್ತು, ವೇಳೆ, ಕಾಲ – ಮೀರಿ.
  10. regular hours (ಮಲಗುವ ಯಾ ಏಳುವ ವಿಷಯದಲ್ಲಿ) ನಿಯತವಾದ ಹೊತ್ತು; ಕ್ಲುಪ್ತ ಕಾಲ, ವೇಳೆ.
  11. small hours ರಾತ್ರಿಯ ಸರಿಹೊತ್ತು; ಮಧ್ಯರಾತ್ರಿಯಾದ ಮೇಲೆ 1, 2, ಮೊದಲಾದ ಗಂಟೆಗಳು.
  12. the hour ಗಡಿಯಾರದ ಗಂಟೆ; ಗಡಿಯಾರದಲ್ಲಿ ಗುರುತು ಹಾಕಿರುವ ಯಾವುದೇ ಗಂಟೆ: bus leaves on the hour ಬಸ್ಸು ಗಂಟೆಗೆ, ನಿಗದಿಯಾದ ಹೊತ್ತಿಗೆ ಸರಿಯಾಗಿ ಹೊರಡುತ್ತದೆ.
  13. till all hours ಬಹಳ ಹೊತ್ತಿನವರೆಗೂ.
ನುಡಿಗಟ್ಟು
  1. one’s hours = ನುಡಿಗಟ್ಟು \((2)\).
  2. one’s last hour.
    1. (ಒಬ್ಬನ ಜೀವಿತದ) ಕೊನೆಯ ಗಂಟೆ; ಸಾಯುವ ಹೊತ್ತು; ಮರಣ ಕಾಲ.
    2. ನಿರ್ಣಾಯಕ – ಸಮಯ, ವೇಳೆ.
  3. the $^2$eleventh hour.
  4. the question of the hour ಈಗಿನ ವಿಷಯ; ಸದ್ಯದ ಪ್ರಶ್ನೆ; ಪ್ರಕೃತ ಸಮಸ್ಯೆ.
  5. the slow sad hour ನಿಧಾನವಾಗಿ ಸಾಗುವ ದುಃಖದ ಕಾಲ.