hostile ಹಾಸ್ಟೈಲ್‍
ಗುಣವಾಚಕ
  1. ಹಗೆಯ; ಶತ್ರುವಿನ; a hostile nation ಶತ್ರುರಾಷ್ಟ.
  2. ಶತ್ರುವಿನಂಥ; ಶತ್ರುವಿನ ಹಾಗಿರುವ; ಶತ್ರುತ್ವವುಳ್ಳ: a hostile act ಶತ್ರುತ್ವದ ಕಾರ್ಯ.
  3. (ರೂಪಕವಾಗಿ) ವಿರುದ್ಧವಾದ: ಪ್ರತಿಕೂಲವಾದ; hostile principles ವಿರುದ್ಧವಾದ ತತ್ತ್ವಗಳುhostile criticism ಪ್ರತಿಕೂಲ ವಿಮರ್ಶೆ.
  4. (ನ್ಯಾಯಶಾಸ್ತ್ರ) (ಒಂದು ಮೊಕದ್ದಮೆ ಯಾ ವಿವಾದದಲ್ಲಿ) ಎದುರು ಪಕ್ಷದ; ವಿರೋಧ ಪಕ್ಷದ; ಪ್ರತಿವಾದಿಯ; ಪ್ರತಿಪಕ್ಷದ: hostile claim ಪ್ರತಿಪಕ್ಷದ ವಾದ.
  5. (ಸಾಕ್ಷಿಯ ವಿಷಯದಲ್ಲಿ) ಪ್ರತಿಕೂಲ; ಎದುರು ಬಿದ್ದ; ವಿರೋಧಿಯಾದ; ವಿಚಾರಣೆಯಲ್ಲಿ ಸ್ವಪಕ್ಷಕ್ಕೆ ವಿರೋಧವಾಗಿ, ಪ್ರತಿಕೂಲವಾಗಿ ಹೇಳಿಕೆ ನೀಡುವ.