horror ಹಾರರ್‍
ನಾಮವಾಚಕ
  1. ನಡುಕ ಹುಟ್ಟಿಸುವ – ಗಾಬರಿ, ದಿಗಿಲು, ಭೀತಿ, ಭಯ.
  2. ಥರಥರಿಕೆ; ಗಾಬರಿಯಿಂದ ನಡುಕ.
  3. ಅತ್ಯಂತ ಜುಗುಪ್ಸೆ.
  4. ಭೀತಿಕಾರಿ; ಭೀತಿಹುಟ್ಟಿಸುವ ವ್ಯಕ್ತಿ, ವಸ್ತು.
  5. (ವೈದ್ಯಶಾಸ್ತ್ರ) (ರೋಗಲಕ್ಷಣವಾದ) ನಡುಕ; ಕಂಪನ.
  6. (ಆಡುಮಾತು) ತೀರ ನಿರಾಶೆ; ಅತ್ಯಂತ ಹತಾಶೆ; ವಿಷಾದ.
  7. ಅಸಹ್ಯಕರವಾದುದು; ಅವಲಕ್ಷಣವಾದುದು; ಕೆಟ್ಟ ಯಾ ಕೀಳು ಅಭಿರುಚಿಯದು: that hat is horror ಆ ಹ್ಯಾಟು ತುಂಬ ಅವಲಕ್ಷಣವಾಗಿದೆ.
ಪದಗುಚ್ಛ
  1. Chamber of Horrors ಕರಾಳ ಕೋಣೆ; ಘೋರಾಲಯ; ಭಯಂಕರ ವಸ್ತುಗಳಿಂದ ತುಂಬಿದ ಸ್ಥಳ (ಹಿಂದೆ ಮ್ಯಾಡಮ್‍ ಟಸ್ಸಾಡ್‍ ಎಂಬಾಕೆ ಇಟ್ಟಿದ್ದ ಮೇಣದ ಬೊಂಬೆಗಳ ಪ್ರದರ್ಶನಾಲಯದಲ್ಲಿ ಕೊಲೆಗಡುಕರು ಮೊದಲಾದ ಪಾತಕಿಗಳ ಬೊಂಬೆಗಳ ಕೊಠಡಿ).
  2. (ಬಹುವಚನದಲ್ಲಿ) horrors! ಎಷ್ಟು ಘೋರ!
  3. the horrors (ಮುಖ್ಯವಾಗಿ ಕಂಪಸನ್ನಿಯಲ್ಲಿಯಂತೆ) ಭೀತಿ ಯಾ ವಿಷಣ್ಣತೆ; ಭಯದ ಯಾ ಕುಗ್ಗಿದ ಮನಸ್ಥಿತಿ.