hopeless ಹೋಪ್‍ಲಿಸ್‍
ಗುಣವಾಚಕ
  1. ಹತಾಶ; ಆಶಾರಹಿತ; ಯಾವ ಆಶೆಯೂ ಇಲ್ಲದ: a hopeless grief ಹತಾಶೆಯಿಂದ ಹುಟ್ಟಿದ ದುಃಖ.
  2. ನಿರಾಶಾದಾಯಕ; ಆಸೆ ಹುಟ್ಟಿಸದ: a hopeless case ನಿರಾಶಾದಾಯಕ ಸ್ಥಿತಿ, ಸಂಗತಿ.
  3. ಅಸಾಧ್ಯ; ಬಗೆಹರಿಸಲಾರದ: balancing my budget is hopeless ನನ್ನ ಆದಾಯವೆಚ್ಚವನ್ನು ಸರಿತೂಗಿಸುವುದು ಅಸಾಧ್ಯ.
  4. ಕೆಲಸಕ್ಕೆ ಬಾರದ; ನಿಷ್ಪ್ರಯೋಜಕ: as a bridge player, you are hopeless ಬ್ರಿಜ್‍ ಆಟದಲ್ಲಿ ನೀನು ಶುದ್ಧ ನಿಷ್ಪ್ರಯೋಜಕ.
  5. ತಿದ್ದಲಾಗದ; ಸರಿಪಡಿಸಲಾಗದ: a hopeless idiot ತಿದ್ದಲಾಗದ ಮೂರ್ಖ.