See also 2hoot
1hoot ಹೂಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು) ಗೇಲಿ ಎಬ್ಬಿಸು; ಲೇವಡಿ ಮಾಡು; ತಿರಸ್ಕಾರದ ಕೂಗುಗಳಿಂದ ಕಾಡು.
  2. ಗುಲ್ಲೆಬ್ಬಿಸಿ ಓಡಿಸಿಬಿಡು; ಗೇಲಿಮಾಡಿ ಓಡಿಸು.
  3. (ಮೋಟಾರು ಗಾಡಿಯ ಹಾರನ್ನು ಮೊದಲಾದವನ್ನು) ಕೂಗಿಸು; ಶಬ್ದಮಾಡುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಅಸಮಾಧಾನದ, ಅಸಮ್ಮತಿಯ ಯಾ ಆಡುಮಾತಿನಲ್ಲಿ ತಮಾಷೆಯ ಸೂಚಕವಾಗಿ) ಬೊಬ್ಬೆಯಿಡು; ಬೊಬ್ಬೆ ಹಾಕು; ಗದ್ದಲ ಮಾಡು; ಹುಯಿಲೆಬ್ಬಿಸು; ಗುಲ್ಲೆಬ್ಬಿಸು.
  2. (ಗೂಬೆಯ ವಿಷಯದಲ್ಲಿ)ಗೂ ಎನ್ನು; ಘೂತ್ಕಾರ ಮಾಡು; ಘೂಕರಿಸು.
  3. (ರೈಲಿನ ಸಿಳ್ಳು, ಸೈರನ್ನು, ಮೋಟಾರು ಗಾಡಿಯ ಹಾರನ್ನಿನ ವಿಷಯದಲ್ಲಿ) ದನಿ ಮಾಡು; ಶಬ್ಬಮಾಡು; ಕೂಗು.
See also 1hoot
2hoot ಹೂಟ್‍
ನಾಮವಾಚಕ
  1. (ಮುಖ್ಯವಾಗಿ ಅಪಹಾಸ್ಯದ ಯಾ ಅಸಮ್ಮತಿಯ) ಬೊಬ್ಬೆ; ಗುಲ್ಲು; ಕೂಗಾಟ; ಅರ್ಥವಿಲ್ಲದ ಕಿರಿಚು.
  2. ಗೂಬೆಯ ಕೂಗು; ಘೂತ್ಕಾರ.
  3. (ರೈಲು, ಸೈರನ್ನು, ಮೋಟಾರು ಗಾಡಿಯ ಹಾರನ್ನು, ಮೊದಲಾದವುಗಳ) ಸಿಳ್ಳು; ಕೂಗು; ಶಬ್ದ; ದನಿ.
  4. (ಆಡುಮಾತು) ನಗೆ; ಗೇಲಿ; ಲೇವಡಿ.
  5. ನಗೆಯ, ಗೇಲಿಯ ಕಾರಣ.
ಪದಗುಚ್ಛ
  1. a hoot (or two hoots)(ಅಶಿಷ್ಟ) ಣದಷ್ಟೂ; ಎಳ್ಳಷ್ಟೂ; ರವಷ್ಟೂ; ಸ್ವಲ್ಪವೂ.
  2. not care a hoot (or two hoots) (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಎಳ್ಳಷ್ಟೂ ಲಕ್ಷಮಾಡದಿರು.
  3. not matter a hoot (or two hoots) ಸ್ವಲ್ಪವೂ ಗಮನಕೊಡಬೇಕಾಗಿಲ್ಲ, ಪರಿಗಣಿಸಬೇಕಾಗಿಲ್ಲ.
  4. not worth a (or two hoots) ಮೂರುಕಾಸಿನ ಬೆಲೆ ಇಲ್ಲದ್ದು; ಕೆಲಸಕ್ಕೆ ಬಾರದ್ದು.