honorary ಆನರರಿ
ಗುಣವಾಚಕ
  1. ಗೌರವ; (ಒಂದು ಪದವಿ ಪಡೆಯಲು ಸಾಮಾನ್ಯವಾಗಿ ಬೇಕಾದ ಅರ್ಹತೆ ಮತ್ತು ಪದವೀಧರನು ನಿರ್ವಹಿಸಬೇಕಾದ ಕರ್ತವ್ಯ ಮೊದಲಾದವುಗಳಿಲ್ಲದೆ) ಗೌರವಾರ್ಥವಾಗಿ ನೀಡಿದ.
  2. (ಆ ಹುದ್ದೆಗೆ ಸಂಬಂಧಿಸಿದ ವೇತನಾದಿಗಳನ್ನು ಪಡೆಯದೆ) ಗೌರವದ ಹುದ್ದೆ, ಅಧಿಕಾರ ಪಡೆದಿರುವ.
  3. ಗೌರವದ ಪ್ರತಿಫಲ, ವೇತನ ಇಲ್ಲದೆ ಸೇವೆ ಸಲ್ಲಿಸುವ: honorary secretary ಗೌರವ ಕಾರ್ಯದರ್ಶಿhonorary treasurer ಗೌರವ ಖಜಾಂಚಿ.
  4. (ಹೊಣೆ, ಜವಾಬ್ದಾರಿಗಳ ವಿಷಯದಲ್ಲಿಒಬ್ಬನ) ಮರ್ಯಾದೆಯನ್ನು, ಗೌರವವನ್ನು ಅವಲಂಬಿಸಿರುವ; ಕಾನೂನಿನ ಮೂಲಕ ನಿರ್ಬಂಧಿಸಲಾಗದ.