See also 2honeymoon
1honeymoon ಹನಿಮೂನ್‍
ನಾಮವಾಚಕ
  1. ಮಧುಚಂದ್ರ; ಮಧುಮಾಸ; ಮಧುವಿಹಾರ; ಮದುವೆಯ ಮೊದಲಲ್ಲಿ ಹೊಸ ದಂಪತಿಗಳ ವಿಹಾರಕಾಲ.
  2. (ರೂಪಕವಾಗಿ) ಹೊಸಹುರುಪು; ಹೊಸ ಉತ್ಸಾಹ; ಪ್ರಾರಂಭದ ದಿನಗಳ ಉತ್ಸಾಹ: the honeymoon days of their friendship ಅವರ ಸ್ನೇಹದ ಹೊಸ ಹುರುಪಿನ ದಿನಗಳು.
ಪದಗುಚ್ಛ

second honeymoon ಎರಡನೆ ಮಧುಚಂದ್ರ; ದ್ವೀತೀಯ ಮಧುವಿಹಾರ; ಮಧುವಿಹಾರ; ಮದುವೆಯಾದ ಕೆಲವು ಕಾಲದ ಮೇಲೆ ದಂಪತಿಗಳು ಕೈಗೊಳ್ಳುವ, ಮಧುಚಂದ್ರವನ್ನು ಹೋಲುವ, ವಿಹಾರ ಪ್ರವಾಸ.

See also 1honeymoon
2honeymoon ಹನಿಮೂನ್‍
ಅಕರ್ಮಕ ಕ್ರಿಯಾಪದ

(ಒಂದು ಸ್ಥಳದಲ್ಲಿ) ಮಧುಚಂದ್ರ, ಮಧುಮಾಸ – ಕಳೆ; ಮಧುವಿಹಾರ ಮಾಡು: honeymooned at (or in) Brindavan ಂದಾವನದಲ್ಲಿ ಮಧುಮಾಸ ಕಳೆದರು.