honeydew ಹನಿಡ್ಯೂ
ನಾಮವಾಚಕ
  1. ಸಿಹಿ ಅಂಟು; ಜೇನುಮಂಜು; ಗಿಡಹೇನು ಸ್ರವಿಸಿದ್ದೆಂದು ಹೇಳಲಾದ, ಕೆಲವು ಗಿಡಗಳ ಎಲೆ ಮತ್ತು ದಂಟಿನ ಮೇಲೆ ಸಿಗುವ ಸಿಹಿವಸ್ತು.
  2. ಅತ; ಅತ್ಯಂತ ಸಿಹಿಯಾದ ವಸ್ತು.
  3. ಸಿಹಿ ಹೊಗೆಸೊಪ್ಪು; ಕಾಕಂಬಿ ಹಾಕಿ ಸಿಹಿಗೊಳಿಸಿದ ಹೊಗೆಸೊಪ್ಪು.
  4. ಜೇನು ಕರಬೂಜ; ನುಣುಪಾದ ಬಿಳಿ ಸಿಪ್ಪೆ ಮತ್ತು ಸಿಹಿಯಾದ ಹಸಿರು ತಿರುಳಿರುವ ಕರಬೂಜದ ಹಣ್ಣಿನ ತಳಿ, ಜಾತಿ.