See also 2holy
1holy ಹೋಲಿ
ಗುಣವಾಚಕ
  1. ಪವಿತ್ರ; ಪುನೀತ; ಪಾವನ; ಪೂತ; ಪುಣ್ಯ: holy ground ಪುಣ್ಯಭೂಮಿ.
  2. ದೇವರ; ದೈವೀ; ದೇವರಿಗೆ – ಸೇರಿದ, ಸಂಬಂಧಿಸಿದ.
  3. ದೈವನಿಯುಕ್ತ; ದೇವರಿಂದ ನಿಯೋಜಿತವಾದ.
  4. ದೈವಭಕ್ತಿಯುಳ್ಳ.
  5. ದೇವರಿಗೆ, ದೇವಾಲಯಕ್ಕೆ ಯಾ ಮತಕ್ಕೆ ಅರ್ಪಿಸಿದ.
  6. ಪೂಜ್ಯ; ಅರ್ಚನೀಯ; ಪೂಜೆಗೆ ಯಾ ಭಕ್ತಿಗೆ ಯೋಗ್ಯವಾದ:holy relics ಪೂಜ್ಯ ಅವಶೇಷಗಳು.
  7. ಧಾರ್ಮಿಕ; ಮತೀಯ: holy rites ಧಾರ್ಮಿಕ ಕ್ರಿಯೆಗಳುholy person ಧಾರ್ಮಿಕ ವ್ಯಕ್ತಿ.
  8. (ನೈತಿಕವಾಗಿ ಧಾರ್ಮಿಕವಾಗಿ) ಪರಿಶುದ್ಧ; ಪರಿಪೂರ್ಣ: holy love ಪರಿಶುದ್ಧ ಪ್ೇಮ.
  9. ಶೀಲವಂತ; ಸದ್ಧರ್ಮಶೀಲ; ಶ್ರೇಷ್ಠಶೀಲ.
  10. (ಕ್ಷುಲ್ಲಕ ಸಂದರ್ಭಗಳಲ್ಲಿ ಅವಹೇಳನಾರ್ಥದಲ್ಲಿ) ಪವಿತ್ರ; ಮಹಾ : holy cow! ಪವಿತ್ರವಾದ ಗೋವು! holy mackerel! ಪವಿತ್ರವಾದ ಮ್ಯಾಕರಲ್‍ ಈನು holy smoke! ಪವಿತ್ರಧೂಮ!
See also 1holy
2holy ಹೋಲಿ
ನಾಮವಾಚಕ
  1. ಪವಿತ್ರಸ್ಥಳ; ಆರಾಧನ ಸ್ಥಳ.
  2. ಪವಿತ್ರವಾದದ್ದು; ಪೂಜ್ಯವಾದದ್ದು.
ಪದಗುಚ್ಛ

holy of holies:

  1. (ದೇವಾಲಯ ಮೊದಲಾದವುಗಳ) ಒಳ ಅಂಕಣ; ಗರ್ಭಾಂಗಣ; ಗರ್ಭಹ; ಯೆಹೂದ್ಯರ ದೇಗುಲದಲ್ಲಿ ತೆರೆ ಹಾಕಿ ಪ್ರತ್ಯೇಕಿಸಿದ ಒಳ ಭಾಗ.
  2. (ರೂಪಕವಾಗಿ) ಪವಿತ್ರವಾದ ಸ್ಥಾನ; ಅತ್ಯಂತ ಪವಿತ್ರವೆಂದು ಭಾವಿಸಿರುವ ಸ್ಥಳ.