See also 2hoist
1hoist ಹಾಇಸ್ಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಬಾವುಟಗಳನ್ನು) ಮೇಲಕ್ಕೇರಿಸು; ಹಾರಿಸು.
  2. (ಕಪ್ಪಿ ಮೊದಲಾದ ಸಲಕರಣೆಗಳಿಂದ) ಮೇಲಕ್ಕೆತ್ತು; ಮೇಲಕ್ಕೆಳೆ; ಮೇಲಕ್ಕೆ ತಳ್ಳು.
ನುಡಿಗಟ್ಟು
  1. hoist one’s flag (ರೂಪಕವಾಗಿ) ತನ್ನ ಬಾವುಟವನ್ನೇರಿಸು; (ದುರ್ಗ, ಪ್ರದೇಶ, ಮೊದಲಾದವನ್ನು) ತಾನು ವಶಪಡಿಸಿಕೊಂಡಿರುವುದನ್ನು, ಅಧಿಕಾರ ವಹಿಸಿಕೊಂಡಿರುವುದನ್ನು ಸೂಚಿಸು.
  2. hoist with his own petard
    1. (ಪರರ ನಾಶಕ್ಕಾಗಿ ಮಾಡಿದ) ತನ್ನ ಸಿಡಿಗುಂಡಿನಿಂದ ತಾನೇ ಸಿಡಿದುಹೋಗಿ.
    2. ಇತರರ ನಾಶಕ್ಕಾಗಿ ಹೂಡಿದ ಹೂಟದಿಂದ ತಾನೇ ನಾಶಕ್ಕಾಗಿ.
See also 1hoist
2hoist ಹಾಇಸ್ಟ್‍
ನಾಮವಾಚಕ
  1. (ಮೇಲಕ್ಕೆ) ಎತ್ತುವುದು; ಏರಿಸುವುದು; ತಳ್ಳುವುದು.
  2. (ಸಾಮಾನುಗಳು ಮೊದಲಾದವನ್ನು ಮೇಲಕ್ಕೆ ಎತ್ತಲು ಬಳಸುವ) ಎತ್ತುಗ; ಎತ್ತುವ – ಯಂತ್ರ, ಸಲಕರಣೆ; ಲಿಹ್ಟ್‍.
  3. ಧ್ವಜಸ್ತಂಭಕ್ಕೆ ತೀರ ಹತ್ತಿರ ಇರುವ ಬಾವುಟದ ಭಾಗ.
  4. ಸಂಕೇತವಾಗಿ ಏರಿಸಿದ ಬಾವುಟಗಳ ಗುಂಪು.
  5. ಲಿಹು; ಎತ್ತಿಗೆ; ಸಾಮಾನುಗಳನ್ನು ಮೇಲಕ್ಕೆ ಸಾಗಿಸುವ ಯಂತ್ರ ಸಲಕರಣೆ.