hobby-horse ಹಾಬಿಹಾರ್ಸ್‍
ನಾಮವಾಚಕ
  1. ಆಟದ (ಹೆಣಿಗೆಯ) ಕುದುರೆ; ಬೆತ್ತದ ಕುದುರೆ; ‘ಮಾರಿಸ್‍ ಡಾನ್ಸ್‍’ ಮೊದಲಾದ ಕುಣಿತದಲ್ಲಿ ಆಟಗಾರರು ಸೊಂಟಕ್ಕೆ ಕಟ್ಟಿಕೊಂಡು ಕುಣಿಯುವ ಬೆತ್ತ ಮೊದಲಾದ ಕಡ್ಡಿಗಳಿಂದ ಮಾಡಿದ ಕುದುರೆಯ ಆಕೃತಿ.
  2. ಕೋಲುಕುದುರೆ; ಕುದುರೆ ತಲೆಯುಳ್ಳ ಮಕ್ಕಳಾಟದ ದೊಣ್ಣೆ, ಕೋಲು. Figure: hobby-horse-2
  3. (ಮರ ಮೊದಲಾದವುಗಳ) ತೂಗು ಕುದುರೆ; ಹಿಂದಕ್ಕೂ ಮುಂದಕ್ಕೂ ತೂಗಾಡುವಂತೆ ಕಾಲುಗಳಿಗೆ ಬಾಗುಪಟ್ಟಿ ಅಳವಡಿಸಿದ, ಮರ ಮೊದಲಾದವುಗಳ, ಆಟದ ಕುದುರೆ.
  4. ರಂಕಣ ಕುದುರೆ; ರಂಕರಾಟಣದಲ್ಲಿ ಬಳಸುವ (ಮರ ಮೊದಲಾದವುಗಳ) ಕುದುರೆ.
  5. ಗೀಳು; ಹುಚ್ಚು; ಒಬ್ಬನ ತಲೆಗೆ ಹತ್ತಿದ್ದು, ಪದೇ ಪದೇ ಅವನು ಅದನ್ನೇ ಹೇಳುತ್ತಿರುವಂಥ ಪ್ರಿಯ ವಿಷಯ, ಭಾವನೆ: this is one of his political hobby-horses ಇದು ಅವನ ರಾಜಕೀಯ ಗೀಳುಗಳಲ್ಲೊಂದು.