See also 2hob
1hob ಹಾಬ್‍
ನಾಮವಾಚಕ
  1. ಗಂಡು ಹೆರೆಟು; ಮಂಟ ಬೆಕ್ಕಿನ ಜಾತಿಯ ಒಂದು ಗಂಡುಪ್ರಾಣಿ.
  2. = hobgoblin.
ನುಡಿಗಟ್ಟು

play (or raise) hob (ಅಮೆರಿಕನ್‍ ಪ್ರಯೋಗ) ಗೊಂದಲ ಎಬ್ಬಿಸು; ರಂಪಮಾಡು; ಅವಾಂತರ, ಕೋಲಾಹಲ – ಉಂಟುಮಾಡು.

See also 1hob
2hob ಹಾಬ್‍
ನಾಮವಾಚಕ
  1. (ಬೆಂಕಿಗೂಡಿನ ಹಿಂಭಾಗದಲ್ಲಿ ಯಾ ಪಕ್ಕಗಳಲ್ಲಿ ಮೇಲ್ಮಟ್ಟಕ್ಕೆ ಸಮಮಟ್ಟದಲ್ಲಿರುವ, ಆಹಾರ, ಪಾತ್ರೆ, ಮೊದಲಾದವನ್ನು ಬೆಚ್ಚಗಿರುವಂತೆ ಇಡಲು ಬಳಸುವ) ಲೋಹದ ಚಾಚುಬಡು ಯಾ ಚಾಚು ಹಲಗೆ; ಲೋಹಾವರಣ (ಹಲಗೆ).
  2. (ಕಾಯಿಟ್‍ ಆಟಗಳಲ್ಲಿ ಗುರಿಯಾಗಿ ಬಳಸುವ) ಗುಂಡುತಲೆಯ ಗೂಟ.
  3. ಲೋಹ ಕೃಂತಕ; ಗಿಯರಿನ ಹಲ್ಲು; ಗೀರೇಣು; ತಿರುಪಿನ ಒಳಗೆರೆ ಮೊದಲಾದವನ್ನು ಮಾಡಲು ಬಳಸುವ, ಕತ್ತರಿಸುವ ಸಲಕರಣೆ.
  4. = hobnail.
  5. (ಅಗ್ಗಿಷ್ಟಿಕೆಯ ಮೇಲೆ ದಬರಿ ಮೊದಲಾದವನ್ನು ಇಡಲು ಬಳಸುವ) ಚಪ್ಪಟೆ ತಗಡು.