history ಹಿಸ್ಟರಿ
ನಾಮವಾಚಕ
(ಬಹುವಚನ histories).
  1. ಚರಿತ್ರೆ; ಇತಿಹಾಸ; ಬರುವಳಿ; ಯಾವುದೇ ಜನ, ದೇಶ, ಅವಧಿ, ವ್ಯಕ್ತಿ, ಮೊದಲಾದವರ ಯಾ ಇಡೀ ಪ್ರಪಂಚದ, ಭೂತಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಮೊದಲಾದ ಸಾರ್ವಜನಿಕ ಘಟನೆಗಳನ್ನು ಕುರಿತ ಅವಿಚ್ಛಿನ್ನವೂ ವ್ಯವಸ್ಥಿತವೂ ಕಾಲಾನುಕ್ರಮದಲ್ಲಿ ನಿರೂಪಿತವೂ ಆದ ಬರಹ, ದಾಖಲೆ.
  2. ಚರಿತ್ರೆ; ಇತಿಹಾಸ; ಬರುವಳಿ; ಭೂತಕಾಲದ ಘಟನೆಗಳ, ಮುಖ್ಯವಾಗಿ ಮಾನವ ವ್ಯವಹಾರಗಳ, ಅಧ್ಯಯನour island history ನಮ್ಮ ದ್ವೀಪ(ದ) ಚರಿತ್ರೆthe history of astronomy ಖಗೋಳವಿಜ್ಞಾದ ಚರಿತ್ರೆ.
  3. (ವಿಶೇಶ ಮಹತ್ವವುಳ್ಳ, ಘಟನೆಗಳುಳ್ಳ) ಹಿಂದಿನ ಕಥೆ; ಪೂರ್ವ ಚರಿತ್ರೆ; ಪೂರ್ವೇತಿಹಾಸ: this house has a history ಈ ಮನೆಗೊಂದು ಚರಿತ್ರೆ ಇದೆ.
  4. ಹಿಂದಿನ ಘಟನೆಯ ಯಾ ಘಟನೆಗಳ ಕ್ರಮಬದ್ಧವಾದ ಇಲ್ಲವೆ ವಿಮರ್ಶಾತ್ಮಕವಾದ ವರದಿ ಯಾ ಸಂಶೋಧನೆ.
  5. (ಕಾಲವನ್ನು ಪರಿಗಣಿಸದೆ ಮಾಡಿದ, ನೈಸರ್ಗಿಕ ಘಟನೆಗಳು, ಮೊದಲಾದವುಗಳ ವ್ಯವಸ್ಥಿತ) ನಿರೂಪಣೆ; ಕಥನ; ಚರಿತ್ರೆ; ಇತಿಹಾಸ; ಮುಖ್ಯವಾಗಿ natural history ಪ್ರಕೃತಿಯ ಚರಿತ್ರೆ; ನಿಸರ್ಗದ ಇತಿಹಾಸ.
  6. ಐತಿಹಾಸಿಕ, ಚಾರಿತ್ರಿಕ – ನಾಟಕ.
  7. ಜನೇತಿಹಾಸ; ಜನಾಂಗ, ಜನಾಂಗೀಯ, ಜನಾಂಗೀಣ – ಚರಿತ್ರೆ; ಜನಾಂಗಗಳ ಬೆಳವಣಿಗೆಯ ಅಧ್ಯಯನ.
  8. (ಜನಾಂಗ, ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯವಾದ) ವೃತ್ತ; ವೃತ್ತಾಂತ; ಇತಿವೃತ್ತ; ಘಟನಾವಳಿ.
  9. ಮಾನವ ವ್ಯವಹಾರಗಳ ಗತಿ, ಮುನ್ನಡೆ.
ಪದಗುಚ್ಛ
  1. ancient history
    1. (ಸಾಮಾನ್ಯವಾಗಿ ಕ್ರಿಸ್ತಶಕ 476ರವರೆಗಿನ ಯೂರೋಪಿನ) ಪುರಾತನ ಚರಿತ್ರೆ.
    2. (ಹಾಸ್ಯ ಪ್ರಯೋಗ) ಪ್ರಾಚೀನ; ಹಳತಾಗಿ ಹೋದದ್ದು; ಓಬೀರಾಯನ ಕಾಲದ್ದು; ಈಗ ಬಳಕೆಯಲ್ಲಿದ್ದು.
  2. make history ಇತಿಹಾಸ ಸೃಷ್ಟಿಸು:
    1. ಚರಿತ್ರೆಯ ಮೇಲೆ ಪರಿಣಾಮ ಬೀರು; ಇತಿಹಾಸದ ಗತಿಯ ಮೇಲೆ ಪ್ರಭಾವ ಉಂಟುಮಾಡು.
    2. ಚರಿತ್ರಾರ್ಹವಾಗಿಸು; ಇತಿಹಾಸಾರ್ಹವಾಗಿ ಮಾಡು; ಚರಿತ್ರೆಯಲ್ಲಿ ದಾಖಲಾಗುವಂತೆ ಮಾಡು.
    3. ಸ್ಮರಣೀಯ ಕೆಲಸ ಮಾಡು.
  3. medieval history (ಕ್ರಿಸ್ತಶಕ 15ನೇ ಶತಮಾನದವರೆಗಿನ, ಯೂರೋಪಿನ) ಮಧ್ಯಯುಗದ ಚರಿತ್ರೆ.
  4. modern history (ಕ್ರಿಸ್ತಶಕ 15ನೇ ಶತಮಾನದಿಂದ ಮುಂದಿನ ಯೂರೋಪಿನ) ಅಧುನಿಕ ಚರಿತ್ರೆ.