historicism ಹಿಸ್ಟಾರಿಸಿಸಮ್‍
ನಾಮವಾಚಕ
  1. ಚಾರಿತ್ರಿಕತತ್ತ್ವ; ಐತಿಹಾಸಿಕ ಸಿದ್ಧಾಂತ; ಸಾಮಾಜಿಕ ಮತ್ತು ಸಾಂಸ್ಕೃತಿಕ ಘಟನೆಗಳು, ಪರಿಸ್ಥಿತಿಗಳು ಅಂದಂದಿನ ಚಾರಿತ್ರಿಕ ಪರಿಸರದಿಂದ ನಿರ್ಧಾರವಾಗುತ್ತವೆ ಎಂಬ ವಾದ.
  2. ಚಾರಿತ್ರಿಕ ನಿಯಮವಾದ; ಚರಿತ್ರೆ ಯಾ ಚಾರಿತ್ರಿಕ ಘಟನೆಗಳು ಮಾನವನ ಕ್ರಿಯೆಯ ಯಾ ಕರ್ತೃತ್ವದ ಮೂಲಕ ಜನಿಸಿರದೆ ಬದಲಾವಣೆ ಹೊಂದದ ನಿಷ್ಠುರ ನಿಯಮಗಳಿಗೆ ಅನುಸಾರವಾಗಿ ಸಂಭವಿಸುತ್ತವೆಯೆಂಬ ವಾದ.
  3. ಚಾರಿತ್ರಿಕ ಪ್ರಾಮುಖ್ಯ ದೃಷ್ಟಿ; ಇತಿಹಾಸ ಪ್ರಧಾನ ದೃಷ್ಟಿ; ಚಾರಿತ್ರಿಕ ವಿಕಾಸವೇ ಮಾನವ ಜೀವನದ ಅತ್ಯಂತ ಮೂಲಭೂತವಾದ ಅಂಶ ಎಂಬ ವಾದ.
  4. ಚರಿತ್ರೆ ಗೌರವ; ಇತಿಹಾಸ ಭಕ್ತಿ; ಕಾನೂನು ಯಾ ಪ್ರಾಚೀನ ಸಂಪ್ರದಾಯ ರೂಢಿಗಳು ಮೊದಲಾದ ಚಾರಿತ್ರಿಕ ಸಂಸ್ಥೆಗಳ ಬಗ್ಗೆ ಆಳವಾದ ಯಾ ಅತಿಯಾದ ಗೌರವ, ಶ್ರದ್ಧೆ.