historical ಹಿಸ್ಟಾರಿಕಲ್‍
ಗುಣವಾಚಕ
  1. ಚರಿತ್ರೆಯ; ಚಾರಿತ್ರಿಕ; ಇತಿಹಾಸದ; ಐತಿಹಾಸಿಕ: historical evidence ಚಾರಿತ್ರಿಕ ಪ್ರಮಾಣ, ಸಾಕ್ಷ್ಯಿ, ದಾಖಲೆhistorical principles ಐತಿಹಾಸಿಕ ತತ್ತ್ವಗಳು.
  2. ಚಾರಿತ್ರಿಕ; ಐತಿಹಾಸಿಕ; ಚರಿತ್ರೆಗೆ – ಸೇರಿದ, ಸಂಬಂಧಿಸಿದ; ಚಾರಿತ್ರಿಕ – ಕಾಲದ, ಅವಧಿಯ (ಪೌರಾಣಿಕವಲ್ಲ, ಪ್ರಾಗೈತಿಹಾಸಿಕವಲ್ಲ ಎಂಬರ್ಥದಲ್ಲಿ ಪ್ರಯೋಗ).
  3. (ವಿಷಯವೊಂದರ ಅಧ್ಯಯನದಲ್ಲಿ) ಚಾರಿತ್ರಿಕ; ಚರಿತ್ರೆಯ ಯಾ ಕಾಲಾನುಕ್ರಮದಲ್ಲಿ ವಿಷಯದ ಬೆಳವಣಿಗೆಯ ವಿಶ್ಲೇಷಣೆಯ ಆಧಾರದ ಮೇಲೆ ನಡೆಸಿದ.
  4. ಪೂರ್ವ, ಹಿಂದಿನ, ಗತ – (ಕಾಲದ); ಈಗಿನದಲ್ಲದ.
  5. (ಕಾದಂಬರಿ, ಚಿತ್ರ, ಮೊದಲಾದವುಗಳ ವಿಷಯದಲ್ಲಿ) ಐತಿಹಾಸಿಕ; ಚರಿತ್ರೆಯ ಘಟನೆಗಳನ್ನು ಕುರಿತ.
  6. ಇತಿಹಾಸಕಾರನ; ಐತಿಹಾಸಿಕ ದೃಷ್ಟಿಯ: of purely historical interest ಬರಿಯ ಐತಿಹಾಸಿಕ ಸ್ವಾರಸ್ಯದ ಯಾ ಪ್ರಾಮುಖ್ಯದ.
ಪದಗುಚ್ಛ

historical method (of investigation) ಐತಿಹಾಸಿಕ, ಚಾರಿತ್ರಿಕ ವಿಧಾನ (ದ ಪರಿಶೀಲನ); ಚರಿತ್ರೆಯ ಯಾ ಬೆಳವಣಿಗೆಯ ಆಧಾರವನ್ನವ ಲಂಬಿಸಿದ (ಪರಿಶೀಲನ) ವಿಧಾನ.