historic ಹಿಸ್ಟಾರಿಕ್‍
ಗುಣವಾಚಕ
  1. ಚರಿತ್ರಾರ್ಹ; ಚಾರಿತ್ರಿಕ; ಐತಿಹಾಸಿಕ; ಇತಿಹಾಸ ಪ್ರಸಿದ್ಧ; ಚರಿತ್ರೆಯಲ್ಲಿ ಹೆಸರಾಂತ, ವಿಖ್ಯಾತ: historic occasions ಐತಿಹಾಸಿಕ ಸಂದರ್ಭಗಳುhistoric spot ಇತಿಹಾಸ ಪ್ರಸಿದ್ಧ ಸ್ಥಳa historic moment ಐತಿಹಾಸಿಕ ಕ್ಷಣ.
  2. (ವ್ಯಾಕರಣ) (ಕ್ರಿಯಾಪದದ ಕಾಲದ ವಿಷಯದಲ್ಲಿ) ಹಿಂದಿನ ಯಾ ನಡೆದುಹೋದ ಘಟನೆಗಳನ್ನು ನಿರೂಪಿಸಲು ಸಾಮಾನ್ಯವಾಗಿ ಬಳಸುವ (ಮುಖ್ಯವಾಗಿ ಲ್ಯಾಟಿನ್‍ ಮತ್ತು ಗ್ರೀಕ್‍ನ) ನ್ಯೂನ ಕ್ರಿಯಾರೂಪ (imperfect) ಯಾ ಗತ ಭೂತಕಾಲ (pluperfect).
  3. (ಪ್ರಾಚೀನ ಪ್ರಯೋಗ ಯಾ ವಿವಾದಾತ್ಮಕ ಪ್ರಯೋಗ) = historical.