historian ಹಿಸ್ಟಾರಿಅನ್‍
ನಾಮವಾಚಕ
  1. ಇತಿಹಾಸಕಾರ; ಚರಿತ್ರಕಾರ; ಚರಿತ್ರೆಯ ಲೇಖಕ, ಮುಖ್ಯವಾಗಿ ಬರಿಯ ವಂಶಾವಳಿಗಳ ದಾಖಲೆಗಾರನೊ ಸಂಕಲನಕಾರನೋ ಆಗಿರದೆ, ವಿಮಾರ್ಶಾತ್ಮಕವಾಗಿ ವಿಶ್ಲೇಷಿಸಿ ಇತಿಹಾಸವನ್ನು ಬರೆಯುವವನು.
    1. ಇತಿಹಾಸಜ್ಞ; ಚರಿತ್ರೆಯಲ್ಲಿ ವಿದ್ವಾಂಸ.
    2. ಇತಿಹಾಸವನ್ನು ಅಧ್ಯಯನ ಮಾಡುವವನು.
ಪದಗುಚ್ಛ
  1. ancient historian
    1. ಪ್ರಾಚೀನೇತಿಹಾಸಕಾರ; ಪ್ರಾಚೀನಕಾಲದ ಇತಿಹಾಸ ಬರೆಯುವವನು.
    2. ಪ್ರಾಚೀನೇತಿಹಾಸದ ಅಭ್ಯಾಸಿ, ಅಧ್ಯಯನ ಮಾಡುವವನು.
  2. English historian
    1. ಆಂಗ್ಲೇತಿಹಾಸಕಾರ; ಇಂಗ್ಲಿಷರ ಯಾ ಇಂಗ್ಲಂಡಿನ ಚರಿತ್ರೆ ಬರೆಯುವವನು.
    2. ಆಂಗ್ಲ ಚರಿತ್ರೆಯ ಅಧ್ಯಾಯಿ.