See also 2hinge
1hinge ಹಿಂಜ್‍
ನಾಮವಾಚಕ
  1. (ಕದವನ್ನು ಬಾಗಿಲುವಾಡಕ್ಕೆ ಸೇರಿಸುವಂಥ) ಕೀಲು; ತಿರುಗಣಿ; ಬಿಜಾಗರಿ.
  2. (ಪ್ರಾಣಿದೇಹದ ಇಂಥದೇ ಕಾರ್ಯಮಾಡುವ) ಸ್ವಾಭಾವಿಕ ಅಂಗವಾದ ಕೀಲು (ಉದಾಹರಣೆಗೆ ಚಿಪ್ಪುಳ್ಳ ಪ್ರಾಣಿಯ ಚಿಪ್ಪಿನ ಕೀಲು).
  3. (ರೂಪಕವಾಗಿ) (ಇಡೀ ವಿಷಯ ನಿಂತಿರುವ) ಕೀಲು; ಆಧಾರ; ಕೇಂದ್ರತತ್ತ್ವ; ನಿರ್ಣಾಯಕ ಅಂಶ.
  4. ಗೋಂದು ಪಟ್ಟಿ; ಅಂಟು ಕಾಗದ; ಅಂಚೆಸಾಂಪನ್ನು ಸ್ಟಾಂಪು ಸಂಪುಟಕ್ಕೆ ಅಂಟಿಸಲಿಕ್ಕಾಗಿರುವ ಗೋಂದು ಹಚ್ಚಿದ ಪಾರದರ್ಶಕ ಕಾಗದದ ಪಟ್ಟಿ.
ಪದಗುಚ್ಛ
  1. off the hinges (ದೈಹಿಕ ಯಾ ಮಾನಸಿಕ) ಸ್ವಾಸ್ಥ್ಯ, ಕೀಲು – ತಪ್ಪಿದ; ಕೀಲು ಕಳಚಿದ.
  2. stamp-hinge = 1hinge(4).
See also 1hinge
2hinge ಹಿಂಜ್‍
ಸಕರ್ಮಕ ಕ್ರಿಯಾಪದ
  1. ಕೀಲು – ಹಾಕು, ಜೋಡಿಸು; ಕೀಲಿಡು.
  2. (ಕೀಲಿನಿಂದ ಹೇಗೋ ಹಾಗೆ) ಸೇರಿಸು, ಜೋಡಿಸು, ತಗುಲಿಸು.
ಅಕರ್ಮಕ ಕ್ರಿಯಾಪದ
  1. (ಕದ ಮೊದಲಾದವುಗಳ ವಿಷಯದಲ್ಲಿ) ಕೀಲಿನ ಮೇಲೆ – ತಿರುಗು, ಸುತ್ತು.
  2. (ರೂಪಕವಾಗಿ) (ತತ್ತ್ವ ಮೊದಲಾದವುಗಳ ವಿಷಯದಲ್ಲಿ) ಅವಲಂಬಿಸಿರು; ಆಧಾರಗೊಂಡಿರು; ನೆಚ್ಚಿರು; ನಿಂತಿರು.