hindsight ಹೈಂಡ್‍ಸೈಟ್‍
ನಾಮವಾಚಕ
  1. ತರುವಾಯದರಿವು; ಪಶ್ಚಾದರಿವು; ಪಶ್ಚಾತ್‍ ಜ್ಞಾನ; ಪಶ್ಚಾದ್ವಿವೇಕ; ಪಶ್ಚಿಮ ಬುದ್ಧಿ; ಪರಿಸ್ಥಿತಿ, ಘಟನೆ, ಮೊದಲಾದವು ಸಂಭವಿಸಿ ಆದ ತರುವಾಯ ಹುಟ್ಟುವ ಅವುಗಳ ಸ್ವರೂಪ, ಅವುಗಳನ್ನು ಪರಿಹರಿಸಬೇಕಾಗಿದ್ದ ಕ್ರಮ ಮೊದಲಾದವುಗಳ ಜ್ಞಾನ, ಅರಿವು.
  2. (ಬಂದೂಕಿನ) ಹಿಂಗಣ್ಣು; ಕೋವಿಯ ಹಿಂಭಾಗಕ್ಕೆ ಜೋಡಿಸಿರುವ ಗುರಿಗಣ್ಣು, ಗುರಿನೋಟದ ಸಲಕರಣೆ.