See also 2highbrow
1highbrow ಹೈಬ್ರೌ
ನಾಮವಾಚಕ
  1. (ಆಡುಮಾತು) ಮೇಧಾವಿ; ಪಂಡಿತ; ಅಭಿಜ್ಞ; ಶಾಸ್ತ್ರಗಳು, ಕಲೆಗಳು, ಮೊದಲಾದವುಗಳಲ್ಲಿ ಪ್ರೌಢ ಆಸಕ್ತಿಯುಳ್ಳವನು.
  2. (ತಿರಸ್ಕಾರಸೂಚಕವಾಗಿ) ಬುದ್ಧಿಗರ್ವಿ; ಪಂಡಿತಮನ್ಯ, ಬುದ್ಧಿ, ಪಾಂಡಿತ್ಯ, ಸಂಸ್ಕೃತಿಗಳಲ್ಲಿ ತಾನು ಬಹುಶ್ರೇಷ್ಠನೆಂದು ಭಾವಿಸುವವನು, ತೋರಿಸಿಕೊಳ್ಳುವವನು.
  3. ಸುಶಿಕ್ಷಿತ; ಸದಾಚಾರ ಸಂಪನ್ನ; ಸದಭಿರುಚಿಯುಳ್ಳವನು.
See also 1highbrow
2highbrow ಹೈಬ್ರೌ
ಗುಣವಾಚಕ
  1. ಮೇಧಾವಿ; ಅಭಿಜ್ಞ; ಪಂಡಿತ; ಶಾಸ್ತ್ರ, ಕಲೆ, ಮೊದಲಾದವುಗಳಲ್ಲಿ ಪ್ರೌಢ ಆಸಕ್ತಿಯುಳ್ಳ ಯಾ ಉತ್ತಮ ಅಭಿರುಚಿಯುಳ್ಳ.
  2. (ತಿರಸ್ಕಾರವಾಗಿ) ಬುದ್ಧಿಗರ್ವಿಯಾದ; ಪಂಡಿತಮನ್ಯನಾದ; ಬುದ್ಧಿ, ಪಾಂಡಿತ್ಯ, ಸಂಸ್ಕೃತಿಗಳಲ್ಲಿ ತಾನು ಬಹುಶ್ರೇಷ್ಠನೆಂದು ಭಾವಿಸುವ, ತೋರಿಸಿಕೊಳ್ಳುವ.