hieroglyph ಹೈಅರಗ್ಲಿಹ್‍
ನಾಮವಾಚಕ
  1. ಚಿತ್ರಲಿಪಿ ಪ್ರಾಚೀನ ಈಜಿಪ್ಟಿನ ಮತ್ತು ಇತರ ಕೆಲವೆಡೆಗಳ ಬರಹಗಳಲ್ಲಿ ಬಳಸಿದ, ಒಂದು ವಸ್ತುವಿಗೆ, ಪದಕ್ಕೆ, ಉಚ್ಚಾರಾಂಶಕ್ಕೆ ಯಾ ಧ್ವನಿಗೆ ಸಂಕೇತವಾದ ಚಿತ್ರ.
  2. ಚಿತ್ರಲಿಪಿಯಲ್ಲಿ ಬರೆದ ಬರಹ.
  3. ಗುಪ್ತಸಂಕೇತ; ಗೂಢಲಿಪಿ; ರಹಸ್ಯಾರ್ಥಕ ಸಂಕೇತ ಯಾ ಗೂಢಾರ್ಥಕ ಚಿಹ್ನೆ.
  4. (ಬಹುವಚನದಲ್ಲಿ) (ಹಾಸ್ಯ ಪ್ರಯೋಗ) ಬ್ರಹ್ಮಲಿಪಿ; ಕ್ಲಿಷ್ಟಲಿಪಿ; ಅರಿಯಲು ಓದಲು ಕಷ್ಟವಾದ ಬರಹ.